Job Description: * ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಥುರಾದಲ್ಲಿ ಮದ್ಯ ಮತ್ತು ಮಾಂಸ ಮಾರಾಟ ಮಾಡುವದನ್ನು ಸಂಪೂರ್ಣ ನಿಷೇಧಿಸಿದ್ದಾರೆ. * ಉತ್ತರ ಭಾರತದ ಉತ್ತರ ಪ್ರದೇಶದಲ್ಲಿ ಮಥುರಾ ಒಂದು ಪವಿತ್ರ ನಗರ. ಶ್ರೀಕೃಷ್ಣ ದೇವರು ಹಿಂದೂ ದೇವಾಲಯವಾದ ಶ್ರೀ ಕೃಷ್ಣ ಈ ಜನ್ಮ ಭೂಮಿಯಲ್ಲಿ ಜನಿಸಿದರು ಎಂದು ಹೇಳಲಾಗುತ್ತದೆ. ಯಮುನಾ ನದಿಯಲ್ಲಿ 25 ಘಾಟ್ಗಳಿವೆ ಅದರಲ್ಲಿ ವಿಶ್ರಾಮ ಘಾಟ್'ನ್ನು ಅತ್ಯಂತ ಪವಿತ್ರವೆಂದು ಗುರುತಿಸಲಾಗಿದೆ. * ಸತಿ ಬುರ್ಜ್ 16 ನೇ ಶತಮಾನದ ಸ್ಮಾರಕ ಗೋಪುರ, ಹಾಗೂ ಕೃಷ್ಣನ ಅಮೃತಶಿಲೆಯ ವಿಗ್ರಹವು ಈ ನಗರದಲ್ಲಿದೆ, ಈ ಕಾರಣದಿಂದ ಧಾರ್ಮಿಕ ನಗರವಾದ ಮಥುರಾದಲ್ಲಿ ಇನ್ನು ಮುಂದೆ ಮದ್ಯ ಮತ್ತು ಮಾಂಸ ಮಾರಾಟ ಮಾಡುವದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.