Job Description: * ಪ್ರಸ್ತುತ ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿನ ಯುವಕರು ಭಯೋತ್ಪಾದನೆಯತ್ತ ಹೋಗುವದನ್ನು ತಡೆಯಲು ಇದೀಗ ಭಾರತೀಯ ಸೇನೆಯು ಕಾಶ್ಮೀರದ ಯುವ ಪ್ರತಿಭೆಗಳಿಗಾಗಿ ಜಶ್ನ್-ಇ-ಜನೂಬ್ ಕ್ರೀಡಾ ಹಬ್ಬವನ್ನು ಆಯೋಜಿಸಿದೆ. * ಭಾರತೀಯ ಸೇನೆಯು ಸುಮಾರು 15 ದಿನಗಳ ಈ ಸುದೀರ್ಘ ಕಾರ್ಯಕ್ರಮವನ್ನು ಕಾಶ್ಮೀರದ ಯುವಕರನ್ನು ಕ್ರೀಡಾ ಚಟುವಟಿಕೆಗಳತ್ತ ಸೆಳೆಯಲು ಈ ಜಶ್ನ್-ಇ-ಜನೂಬ್ ಎಂಬ ಕ್ರೀಡಾ ಉತ್ಸವವನ್ನು ಆರಂಭಿಸಿತ್ತು. * ಈ ಕ್ರೀಡಾಕೂಟವು ಮಂಗಳವಾರ ಕೊನೆಗೊಂಡಿದೆ, ಈ ಕ್ರೀಡಾ ಉತ್ಸವದಲ್ಲಿ ಕಬಡ್ಡಿ, ಓಟ ಮತ್ತು ಸ್ಕೈ ಡೈವಿಂಗ್, ಮಾರ್ಷಲ್ ಆರ್ಟ್ಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಗಿದೆ, ಈ ಕ್ರೀಡೆಗಳಲ್ಲಿ ಹಲವಾರು ಕಾಶ್ಮೀರದ ಯುವಕರು ಪಾಲ್ಗೊಂಡಿದ್ದರು.