Job Description: * ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಬಲೀಕರಣಗೊಳಿಸುವ ಸಂಸದೀಯ ಕಾರ್ಯಕ್ರಮವನ್ನು ಪ್ರಾರಂಭಿಸಿದರು. * ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಈ ಕಾರ್ಯಕ್ರಮವನ್ನು ಶ್ರೀನಗರದ ಶೇರ್-ಐ-ಕಾಶ್ಮೀರ ಅಂತರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಉದ್ಘಾಟಿಸಿದರು. * ಈ ಕಾರ್ಯಕ್ರಮದ ಅಡಿಯಲ್ಲಿ ಅಧಿಕಾರ ಹೊಂದಿರುವ ಪಂಚಾಯತ್ಗಳು ಪ್ರಜಾಪ್ರಭುತ್ವವನ್ನು ಬಲಪಡಿಸಲು ಮತ್ತು ಜನರ ವಿಶ್ವಾಸವನ್ನು ಹೆಚ್ಚಿಸಲು ಈ ಕಾರ್ಯಕ್ರಮವು ಸಹಾಯ ಮಾಡಲಿದೆ. * ಸಂಸದೀಯ ಪ್ರಚಾರ ಕಾರ್ಯಕ್ರಮವು ಆಡಳಿತ ಹಾಗೂ ಯೋಜನಾ ಸಂಸ್ಥೆಗಳನ್ನೂ ತಳಮಟ್ಟದಲ್ಲಿ ಬಲಪಡಿಸಲು ಮಾಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. * ಕಾರ್ಯಕ್ರಮದ ಆವೃತ್ತಿಗಳು: - ಮೊದಲನೇ ಆವೃತ್ತಿ: 2021ರ ಜನೆವರಿ. 8 ರಂದು ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ಪ್ರಥಮ ಔಟ್ರೀಚ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ಕಾರ್ಯಕ್ರಮದಲ್ಲಿ 445 ಪಂಚಾಯತ್ ಪ್ರತಿನಿಧಿಗಳು ಪಾಲ್ಗೊಂಡಿದ್ದರು. - 2 ನೇ ಆವೃತ್ತಿ: 2021 ರ ಫೆಬ್ರವರಿಯಲ್ಲಿ ಮೇಘಾಲಯ ಹಾಗೂ ಈಶಾನ್ಯ ರಾಜ್ಯಗಳ ಅನುಕೂಲಕ್ಕಾಗಿ ಈ ಕಾರ್ಯಕ್ರಮವನ್ನು ಶಿಲ್ಲಾಂಗ್ನಲ್ಲಿ ನಡೆಸಲಾಗಿತ್ತು, ಇದರಲ್ಲಿ ಈಶಾನ್ಯ ರಾಜ್ಯಗಳ ಸ್ಥಳೀಯ ಸಂಸ್ಥೆಗಳ 115 ಸದಸ್ಯರು ಪಾಲ್ಗೊಂಡಿದ್ದರು. - 3 ನೇ ಆವೃತ್ತಿ: 2021 ರ ಆಗಸ್ಟ್. 27 ರಂದು ಲಡಾಖ್ನ ಕೇಂದ್ರಾಡಳಿತ ಪ್ರದೇಶದ ಸಂಸ್ಥೆಗಳಿಗಾಗಿ ನಡೆಸಲಾಗಿದೆ, ಇದರಲ್ಲಿ 195 ಪಂಚಾಯತ್ನ ಪ್ರತಿನಿಧಿಗಳು ಪಾಲ್ಗೊಂಡಿದ್ದರು. - 4 ನೇ ಆವೃತ್ತಿ: 2021 ರ ಆಗಸ್ಟ್. 31 ರಂದು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದ ಶ್ರೀನಗರದ 'ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣಕ್ಕಾಗಿ ಪಾರ್ಲಿಮೆಂಟರಿ ಔಟ್ರೀಚ್ ಪ್ರೋಗ್ರಾಂ' ಎಂಬ ವಿಷಯದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.