Job Description: * ಶ್ರೀಲಂಕಾ ದೇಶವು 2021 ರ ಆಗಸ್ಟ್. 31 ರಂದು ಆಹಾರ ಕೊರತೆಯ ಮೇಲೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ . * ಪ್ರಸ್ತುತ ಶ್ರೀಲಂಕಾ ರಾಷ್ಟ್ರವು ಅತಿಯಾದ ಆರ್ಥಿಕ ಬಿಕ್ಕಟ್ಟಿನ್ನು ಎದುರಿಸುತ್ತಿದೆ, ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಸಕ್ಕರೆ, ಅಕ್ಕಿ ಮತ್ತು ಇತರ ಅಗತ್ಯ ಆಹಾರಗಳ ಸಂಗ್ರಹವನ್ನು ಎದುರಿಸಲು ತುರ್ತು ನಿಯಮಗಳನ್ನು ಘೋಷಿಸಿದ್ದಾರೆ. * ಶ್ರೀಲಂಕಾ ಕರೋನವೈರಸ್'ನೊಂದಿಗೆ ಹೋರಾಡುತ್ತಿದೆ, ಇದರ ಮಧ್ಯೆ ಇದೀಗ ಆಹಾರದ ಕೊರತೆ ಎದುರಾಗಿದೆ. * ಪ್ರಸ್ತುತ ಶ್ರೀಲಂಕಾ ರಾಷ್ಟ್ರದ ಆರ್ಥಿಕತೆಯು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ 2020 ರಲ್ಲಿ 3.6 ಶೇಕಡಾ ಕಡಿಮೆಯಾಗಿದೆ. * ಶ್ರೀಲಂಕಾ 2021 ರ ಆಗಸ್ಟ್ ವೇಳೆಗೆ ವಿಶ್ವದಾದ್ಯಂತ ಕೋವಿಡ್-19 ರೋಗಕ್ಕೆ ಅತಿ ಹೆಚ್ಚು ದೈನಂದಿನ ಸಾವುಗಳನ್ನು ಹೊಂದಿರುವ ನಾಲ್ಕನೇ ದೇಶವಾಗಿದೆ. * ಅತಿ ಹೆಚ್ಚು ದೈನಂದಿನ ಸಾವುಗಳನ್ನು ಹೊಂದಿರುವ ಇತರೆ ಮೂರು ದೇಶಗಳು ಇಂತಿವೆ: ಜಾರ್ಜಿಯಾ, ಟುನೀಶಿಯಾ ಮತ್ತು ಮಲೇಷಿಯಾ.