Job Description: * ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ ಮಾರ್ಗದಲ್ಲಿ ಈಶಾನ್ಯ ಗಡಿನಾಡು ರೈಲ್ವೇಸ್ ಜಂಗಲ್ ಟೀ ಟಾಯ್ ರೈಲು ಸಫಾರಿ ಆರಂಭಿಸಿದೆ. * ಪ್ರಸ್ತುತ ಈ ಟಾಯ್-ರೈಲು ಸಫಾರಿ ರೈಲು ಡಾರ್ಜಿಲಿಂಗ್ ಹಿಮಾಲಯನ್ ಸಿಲಿಗುರಿ ಜಂಕ್ಷನ್ನಿಂದ ಪಶ್ಚಿಮ ಬಂಗಾಳದ ರೊಂಗ್ಟಾಂಗ್ ರೈಲು ನಿಲ್ದಾಣದವರೆಗೆ ಚಲಿಸುತ್ತದೆ. * ಈ ಮೊದಲು ಪ್ರಾರಂಬಿಸಲಾಗಿರುವ ಪಾರಂಪರಿಕ ಆಟಿಕೆ ರೈಲು ಸೇವೆಯು ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಹಾಗೂ ಡಾರ್ಜಿಲಿಂಗ್ ನಡುವೆ ಮತ್ತೆ ಆರಂಭವಾಗಿವೆ. * ಪ್ರಸ್ತುತ ಈ ರೈಲುಗಳು ಕೋವಿಡ್-19 ಸಾಂಕ್ರಾಮಿಕದ ರೋಗದ ಮಧ್ಯೆ ತನ್ನ ಸೇವೆಯನ್ನು ಸುಮಾರು 17 ತಿಂಗಳು ಸ್ಥಗಿತಗೊಳಿಸಲಾಗಿತ್ತು. * ವಿಶ್ವಸಂಸ್ಥೆಯು 1999 ರ ಡಿಸೆಂಬರ್. 5 ರಂದು ಈ ಆಟಿಕೆ ರೈಲುನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ಘೋಷಣೆ ಮಾಡಿದೆ. * ಈ ಪ್ರದೇಶದಲ್ಲಿ ಟಾಯ್ ರೈಲುಗಳ ಮೂಲಕ ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಆಟಿಕೆ ರೈಲು ಸಫಾರಿಯುನ್ನು ಆರಂಭಿಸಲಾಗಿದೆ.