Job Description: * ಪ್ರಸ್ತುತ '7' ವರ್ಷಗಳು ಪೂರ್ಣಗೊಳಿಸಿದ ಪ್ರಧಾನ ಮಂತ್ರಿ ಜನಧನ ಯೋಜನೆ, 2014 ಆಗಸ್ಟ್ 15 ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದರು, ಈ ಯೋಜನೆಯಿಂದಾಗಿ ಭಾರತದ ಅಭಿವೃದ್ಧಿ ಪಥವೇ ಬದಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. * ಸಾಮಾನ್ಯ ಜನರಿಗೆ ಬ್ಯಾಂಕ್ ಖಾತೆಗಳನ್ನು ತೆರೆಯಲು ಈ 'ಪ್ರಧಾನ ಮಂತ್ರಿ ಜನಧನ' ಯೋಜನೆಯು ಸಹಾಯವಾಗಿದೆ, ಮತ್ತು ಇದರಿಂದಾಗಿ ಭಾರತದ ಅಭಿವೃದ್ಧಿ ಪಥವೇ ಬದಲಾಗಿದೆ ಎಂದಿದ್ದಾರೆ, * ಪ್ರಧಾನ ಮಂತ್ರಿ ಜನಧನ ಯೋಜನೆಯು ಅಸಂಖ್ಯಾತ ಭಾರತೀಯರ ಹಣಕಾಸಿನ ಲಭ್ಯತೆ ಮತ್ತು ಸಬಲೀಕರಣಕ್ಕೆ ಸಹಾಯವಾಗಿದೆ, ಈ ಯೋಜನೆಯಿಂದಾಗಿ ಪಾರದರ್ಶಕತೆಯನ್ನು ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು. * ಈ ಯೋಜನೆಯ ಅಡಿಯಲ್ಲಿ 43.04 ಕೋಟಿ ಬ್ಯಾಂಕ್ ಖಾತೆಗಳ ತೆರೆಯಲಾಗಿದೆ, ಅದರಲ್ಲಿ 36.86 ಕೋಟಿ ಖಾತೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.