Job Description: * ಪ್ರಸ್ತುತ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ನ ಟಿ35 ಮಹಿಳೆಯರ 100 ಮೀ. ಓಟದಲ್ಲಿ ಚೀನಾ ದೇಶದ ಹೋ ಕ್ಸಿಯಾ ಎಂಬ ಮಹಿಳೆ ವಿಶ್ವದಾಖಲೆಯನ್ನು ನಿರ್ಮಿಸಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. * ಆಸ್ಟ್ರೇಲಿಯಾದ ಇಸಿಸ್ ಹೋಲ್ಟ್ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. * ಗ್ರೇಟ್ ಬ್ರಿಟನ್ನ ಮರಿಯಾ ಲಿಲಿ ಅವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. * ಈ ಹಿಂದೆ ಚೀನಾದ ಹೋ ಕ್ಸಿಯಾ ಅವರು 2016 ರ ರಿಯೊ ಕೂಟದಲ್ಲಿ ಎರಡು ಚಿನ್ನದ ಪದಕವನ್ನು ಜಯಿಸಿದ್ದರು, ಇದೀಗ ಈ ಪ್ಯಾರಾಲಿಂಪಿಕ್ಸ್ ನಲ್ಲಿಯೂ ಕೂಡ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಪ್ರಸ್ತುತ ಬ್ರೆಜಿಲ್ನ ಯೆಲ್ಸಿನ್ ಜಾಕ್ಸ್ ಟೋಕಿಯೊದ ಈ ಕ್ರೀಡಾಕೂಟದ ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ ಚಿನ್ನ ಜಯಿಸಿದ ಮೊದಲ ಅಥ್ಲೀಟ್ ಇವರಾಗಿದ್ದಾರೆ, ಇವರು 5 ಸಾವಿರ ಮೀ. ಟಿ11 ವಿಭಾಗದಲ್ಲಿ ಅವರು ಓಡಿ ಗುರಿ ತಲುಪಿ ಚಿನ್ನ ಪಡೆದುಕೊಂಡಿದ್ದಾರೆ. * ಜಪಾನ್ ನ ಕೆನ್ಯಾ ಕರಾಸವಾ ಅವರು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. * ಜಪಾನ್ ದೇಶದ ಮತ್ತೋರ್ವ ಪ್ರಜೆ ಶಿನ್ಯಾ ವಾಡಾ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ.