Job Description: * 2021 ರ ಆಗಸ್ಟ್. 25 ರಂದು ಜಲಶಕ್ತಿ ಸಚಿವಾಲಯವು ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಸುಜಲಂ ಎಂಬ 100 ದಿನಗಳ ಅಭಿಯಾನವನ್ನು ಪ್ರಾರಂಭಿಸಿದೆ. * ಸುಜಲಂ ಎಂದರೆ ಭಾರತದ ಹಳ್ಳಿಗಳಾದ್ಯಂತ ತ್ಯಾಜ್ಯ ನೀರಿನ ನಿರ್ವಹಣೆಯನ್ನು ಕೈಗೊಳ್ಳುವ ಮೂಲಕ ಹೆಚ್ಚು ಒಡಿಎಫ್ ಪ್ಲಸ್ ಗ್ರಾಮಗಳನ್ನು ರಚಿಸುವ ಯೋಜನೆಯಾಗಿದೆ. * ಜಲ ಸಚಿವಾಲಯ ನೀಡಿರುವ ಮಾಹಿತಿಯ ಪ್ರಕಾರ ಈ ಅಭಿಯಾನವು ತ್ಯಾಜ್ಯ ನೀರಿನ ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಲಿದೆ, ಹಾಗೂ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಹಂತ -2 ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ.