Job Description: * ಪ್ರಸ್ತುತ ವಿಶ್ವ ಬ್ಯಾಂಕ್ ಅಫ್ಘಾನಿಸ್ತಾನದಲ್ಲಿನ ಯೋಜನೆಗಳಿಗೆ ನಿಧಿಯನ್ನು ನಿಲ್ಲಿಸಿದೆ. * ಇತ್ತೀಚಿಗೆ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿ ಕೊಂಡ ನಂತರ ವಿಶ್ವ ಬ್ಯಾಂಕ್ ಈ ಕ್ರಮವನ್ನು ಕೈಗೊಂಡಿದೆ. * ಪ್ರಸ್ತುತ ವಿಶ್ವಬ್ಯಾಂಕ್ ಅಫಘಾನಿಸ್ತಾನದಲ್ಲಿನ ಯೋಜನೆಗಳ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಪಡಿಸಲು 2002 ರಿಂದ 5.3 ಬಿಲಿಯನ್ ಯುಎಸ್ ಡಾಲರ್ ನೀಡಲು ಬದ್ದವಾಗಿತ್ತು. * ಪ್ರಸ್ತುತ ಆಗಸ್ಟ್.15 ರಂದು ಅಫ್ಘಾನಿಸ್ತಾನದ ಇಸ್ಲಾಮಿಕ್ ಗಣರಾಜ್ಯ ಸರ್ಕಾರವು ಪತನಗೊಂಡಿತು, ನಂತರ ಆ ದೇಶದ ಪ್ರಧಾನಿ ಅಶ್ರಫ್ ಘನಿ ಪಲಾಯನ ಮಾಡಿದರು ಆ ಸಮಯದಲ್ಲಿ ತಾಲಿಬಾನಿಗಳು ಅಫಘಾನಿಸ್ತಾನದ ರಾಜ್ಯಧಾನಿ ಕಾಬೂಲ್ ನ್ನು ವಶಪಡಿಸಿಕೊಂಡರು.