Job Description: * ಭಾರತೀಯ ಜೀವ ವಿಮಾ ನಿಗಮವು (LIC) ಏಜೆಂಟರಿ(ಮಧ್ಯವರ್ತಿ)ಗಾಗಿ "ಆನಂದ ಮೊಬೈಲ್ ಅಪ್ಲಿಕೇಶನ್" ಎಂಬ ಮೊಬೈಲ್ ಆಪ್ ನ್ನು ಬಿಡುಗಡೆ ಮಾಡಿದೆ. * ಈ ಆನಂದ ಮೊಬೈಲ್ ಅಪ್ಲಿಕೇಶನ್ ನಿಂದ ಏಜೆಂಟ್ ಅಥವಾ ಮಧ್ಯವರ್ತಿಯ ಸಹಾಯದಿಂದ ಕಾಗದ ರಹಿತ(ಪೇಪರ್ ಲೆಸ್) ಮಾಡ್ಯೂಲ್ ಮೂಲಕ ವಿಮಾ ಪಾಲಿಸಿಯನ್ನು ಪಡೆಯಲು ಅಪ್ಲಿಕೇಶನ್ ಸಹಾಯ ಮಾಡಲಿದೆ. * ಈ ಆನಂದ ಅಪ್ಲಿಕೇಶನ್ ನ್ನು ಎಲ್ಐಸಿ(LIC)ಏಜೆಂಟ್ಗಾಗಿ ಮಾತ್ರ ಪ್ರಾರಂಭಿಸಲಾಗಿದೆ. * ಭಾರತೀಯ ಜೀವ ವಿಮಾ ನಿಗಮ (LIC): LIC ಭಾರತದ ಹಣಕಾಸು ಸಚಿವಾಲಯದ ಅಡಿಯಲ್ಲಿ ಶಾಸನಬದ್ಧ ವಿಮೆ ಮತ್ತು ಹೂಡಿಕೆ ನಿಗಮವಾಗಿದೆ. ಇದನ್ನು1956 ರ ಸೆಪ್ಟೆಂಬರ್. 1 ರಂದು ಸ್ಥಾಪನೆ ಮಾಡಲಾಗಿದೆ, ಹಾಗೂ ಈ ಸಂಸ್ಥೆಯು 2019 ರ ವೇಳೆಗೆ 28.3 ಲಕ್ಷ ಕೋಟಿ ರೂಪಾಯಿಗಳ ಒಟ್ಟು ಜೀವವಿಮೆ ಯನ್ನು ಹೊಂದಿದೆ ಎಂದು ತಿಳಿದುಬಂದಿದೆ. * ಪ್ರಸ್ತುತ LIC 290 ಮಿಲಿಯನ್ ಪಾಲಿಸಿದಾರರನ್ನು ಹೊಂದಿದೆ.