Job Description: * ಮಹಾರಾಷ್ಟ್ರ ಸರ್ಕಾರವು ವಿಧವೆಯರಿಗಾಗಿ 'ಮಿಷನ್ ವಾತ್ಸಲ್ಯ' ಎಂಬ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದೆ. * ಈ ಮಿಷನ್ ವಾತ್ಸಲ್ಯವನ್ನು ವಿಧವೆಯರಿಗಾಗಿ ಅಭಿವೃದ್ಧಿ ಪಡಿಸಲಾಗಿದೆ, ಇದರಿಂದಾಗಿ ಗ್ರಾಮೀಣ ಪ್ರದೇಶಗಳ ಬಡ ಹಿನ್ನೆಲೆ ಹಾಗೂ ವಂಚಿತ ವರ್ಗಗಳಲ್ಲಿರುವ ವಿಧವೆಯರಿಗೆ ಸಹಾಯವಾಗಲಿದೆ ಎಂದಿದ್ದಾರೆ. * ವಿಧವೆಯರು ಈ ಮಿಷನ್ ವಾತ್ಸಲ್ಯ ಯೋಜನೆಯ ಅಡಿಯಲ್ಲಿ ಸಂಜಯ್ ಗಾಂಧಿ ನಿರಧರ್ ಯೋಜನೆ ಹಾಗೂ ಘರ್ಕುಲ್ ಯೋಜನೆಗಳಿಂದ ಪ್ರಯೋಜನವನ್ನು ಪಡೆಯಲಿದ್ದಾರೆ. * ಈ ಹಿಂದಿನ 18 ತಿಂಗಳಲ್ಲಿ ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಸುಮಾರು 15,095 ಮಹಿಳೆಯರು ವಿಧವೆಯರಾಗಿದ್ದಾರೆ, ಇದೀಗ ಈ ಮಿಷನ್ ವಾತ್ಸಲ್ಯ ಯೋಜನೆಯ ಅಡಿಯಲ್ಲಿ 14,661 ಮಹಿಳೆಯರಿಗೆ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ. * ಸಂಜಯ್ ಗಾಂಧಿ ನಿರಧರ್ ಯೋಜನೆ : ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಪ್ರತಿ ತಿಂಗಳು 900 ರೂ. ನೀಡಲಾಗುತ್ತದೆ, ಫಲಾನುಭವಿಗಳ ಮಕ್ಕಳು 25 ವರ್ಷ ಪೂರೈಸುವ ತನಕ ಅಥವಾ ಅವರಿಗೆ ಉದ್ಯೋಗ ಸಿಗುವವರೆಗೆ ನೀಡಲಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. * ಸಂಜಯ್ ಗಾಂಧಿ ನಿರಧರ್ ಯೋಜನೆಯು ವಿಧವೆಯರ ಅಷ್ಟೇ ಅಲ್ಲದೇ ನಿರ್ಗತಿಕರು, ಅಂಗವಿಕಲರು, ಅಂಧರು, ವಿಚ್ಛೇದಿತ ಮಹಿಳೆಯರು, ವೇಶ್ಯಾವಾಟಿಕೆಯಿಂದ ಮುಕ್ತರಾದ ಮಹಿಳೆಯರು, ಅನಾಥ ಮಕ್ಕಳು, ಈ ಎಲ್ಲರಿಗೂ ಈ ಯೋಜನೆಯಿಂದ ಸಹಾಯವಾಗಲಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.