Job Description: * ಪ್ರಸ್ತುತ ಕೇಂದ್ರ ಸರ್ಕಾರವು ಅಸಂಘಟಿತ ವಲಯದ ಕಾರ್ಮಿಕರ ಡೇಟಾಬೇಸ್ ನಿರ್ವಹಿಸಲು ಇ-ಶ್ರಮ (e-SHRAM) ಪೋರ್ಟಲ್ ನ್ನು ಆರಂಭಿಸಲಿದೆ. * ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ್ ಯಾದವ್ ಅವರು ಆಗಸ್ಟ್ 24 ರಂದು ಇ-ಶ್ರಮಪೋರ್ಟಲ್ ನ ಲಾಂಛನವನ್ನು ಬಿಡುಗಡೆ ಮಾಡಿದ್ದಾರೆ. * ಇ-ಶ್ರಮ (e-SHRAM) ಪೋರ್ಟಲ್ ಅಸಂಘಟಿತ ಕಾರ್ಮಿಕರನ್ನು ಪರಿಗಣಿಸುವದು ಉತ್ತಮವಾದ ಹೆಜ್ಜೆಯಾಗಿದೆ ಹಾಗೂ ನಮ್ಮ ರಾಷ್ಟ್ರ ನಿರ್ಮಾಣಕ್ಕಾಗಿ ಶ್ರಮಿಸುವ ಶ್ರಮ ಜೀವಿಗಳ ರಾಷ್ಟ್ರೀಯ ಡೇಟಾಬೇಸ್ ಪೋರ್ಟಲ್ ಇದಾಗಿದೆ. * ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಮಾರು 38 ಕೋಟಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ, ಹಾಗೂ ಇದರಿಂದಾಗಿ ಲಕ್ಷಾಂತರ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಇದು ಒಂದು ಉತ್ತಮ ವೇದಿಕೆ ಯಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.