Job Description: * ಇಂಟರ್ನೆಟ್ ಸಂಸ್ಥೆಯಾಗಿರುವ ಯಾಹೂ ಇದೀಗ ಭಾರತದಲ್ಲಿನ ತನ್ನ ಎಲ್ಲ ಸುದ್ದಿ ತಾಣವನ್ನು ಮುಚ್ಚಿದೆ. * ಪ್ರಸ್ತುತ ಭಾರತ ಸರ್ಕಾರದ ನೂತನ ನೇರ ವಿದೇಶಿ ಹೂಡಿಕೆಯ ನಿಯಮಗಳಿಂದ ಇದೀಗ ಸಂಸ್ಥೆಯ ಮೇಲೆ ವಿದೇಶಿ ಮಾಲಕತ್ವಕ್ಕೆ ನಿರ್ಬಂಧವನ್ನು ಹೇರಲಾಗಿದೆ ಇದರಿಂದಾಗಿ ಸಂಸ್ಥೆಯನ್ನು ನಡೆಸುವುದು ಕಷ್ಟವಾಗಿದೆ ಎಂದು ಯಾಹೂ ಮಾಹಿತಿಯನ್ನು ನೀಡಿದೆ. * ಪ್ರಸ್ತುತ ಭಾರತದಲ್ಲಿನ ಯಾಹೂ ಅಂಗಸಂಸ್ಥೆಗಳಾಗಿರುವ ಯಾಹೂ ನ್ಯೂಸ್, ಯಾಹೂ ಕ್ರಿಕೆಟ್, ಫೈನಾನ್ಸ್, ಎಂಟರ್ಟೈನ್ಮಂಟ್'ಗಳನ್ನೂ ಮುಚ್ಚಲಾಗಿದೆ, ಆದರೆ ಯಾಹೂ ಇ-ಮೇಲ್ ಹಾಗೂ ಯಾಹೂ ಸರ್ಚ್ ಎಂಜಿನ್ನು ಮುಚ್ಚಲಾಗುವುದಿಲ್ಲ ಎಂದು ಯಾಹೂ ಸಂಸ್ಥೆ ತಿಳಿಸಿದೆ. * 2017 ರಲ್ಲಿ ಯಾಹೂ ಸಂಸ್ಥೆಯನ್ನು ಅಮೇರಿಕದ ವೆರಿಜಾನ್ ಸಂಸ್ಥೆಯು ಖರೀದಿ ಮಾಡಿದೆ. * ಯಾಹೂ ಸಂಸ್ಥೆಯು ಒಂದು ಅಮೇರಿಕನ್ ವೆಬ್ ಸೇವೆ ಒದಗಿಸುವ ಸಂಸ್ಥೆಯಾಗಿದೆ, ಹಾಗೂ ಇದು ತನ್ನ ಪ್ರಧಾನ ಕಚೇರಿಯನ್ನು ಕ್ಯಾಲಿಫೋರ್ನಿಯಾದ ಸನ್ನಿವೇಲ್ನಲ್ಲಿ ಹೊಂದಿದೆ * ಯಾಹೂ ಸಂಸ್ಥೆಯನ್ನು 1994 ರ ಜನೇವರಿಯಲ್ಲಿ ಸ್ಥಾಪನೆ ಮಾಡಲಾಗಿದೆ. * ಈ ಸಂಸ್ಥೆಯ ಸ್ಥಾಪಕರು: ಜೆರ್ರಿ ಯಾಂಗ್, ಡೇವಿಡ್ ಫಿಲೋ.