Job Description: * ಪ್ರಸ್ತುತ ಭಾರತದ ರಾಜಧಾನಿ ದೆಹಲಿಯ ನಗರಗಳಲ್ಲಿ ಅತೀ ಹೆಚ್ಚು CCTV ಅಳವಡಿಕೆ ಮಾಡಿದೆ. * ಇದೀಗ ದೆಹಲಿ ನಗರವು CCTV ಅಳವಡಿಕೆಯಲ್ಲಿ ಲಂಡನ್, ಶಾಂಘೈ, ನ್ಯೂಯಾರ್ಕ್ ಮತ್ತು ಸಿಂಗಾಪುರ ನಗರಗಳನ್ನು ಹಿಂದಿಕ್ಕಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ. * ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಚದರ ಮೈಲಿಗೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಅಂತಾರಾಷ್ಟ್ರೀಯ ನಿಯತಕಾಲಿಕದಲ್ಲಿ ಪ್ರಕಟವಾದ ಮಾಹಿತಿಯನ್ನು ತಿಳಿಸಿದ್ದಾರೆ. * ವಿಶ್ವದಾದ್ಯಂತದ 150 ನಗರಗಳ ಪೈಕಿ ದೆಹಲಿ ನಗರವು ಜಾಗತಿಕವಾಗಿ ಅತೀ ಹೆಚ್ಚು CCTV ಹೊಂದಿದೆ, ಪ್ರಸ್ತುತ ದೆಹಲಿಯ ಪ್ರತಿ ಚದರ ಮೈಲಿಗೆ 1,826 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.