Job Description: * ತಾಲಿಬಾನ್ ಉಗ್ರರು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದಾರೆ ಇದೀಗ ಅಫ್ಘಾನಿಸ್ತಾನದಲ್ಲಿ ಹಣಕಾಸಿನ ಕೊರತೆ ಉಂಟಾಗಿದೆ, ದಿನ ಬಳಕೆಯ ಎಲ್ಲಾ ವಸ್ತುಗಳ ಬೆಲೆಯೂ ಹೆಚ್ಚಾಗಿದೆ, ಈ ಕಾರಣದಿಂದಾಗಿ ಅಫ್ಘಾನಿಸ್ತಾನ ಬ್ಯಾಂಕ್ (ಸೆಂಟ್ರಲ್ ಬ್ಯಾಂಕ್ ಆಫ್ ಅಫ್ಘಾನಿಸ್ತಾನ) ಹೊಸ ನೋಟುಗಳನ್ನು ಮುದ್ರಿಸಲು ಮುಂದಾಗಿದೆ. * ಅಫ್ಘಾನ್ ಸಂಸತ್ತು 100 ಬಿಲಿಯನ್ ಅಫ್ಘಾನಿಸ್ ನೋಟು ಮುದ್ರಿಸಲು ಕೇಂದ್ರೀಯ ಬ್ಯಾಂಕ್ ಅಧಿಕಾರಿಗಳಿಗೆ ಅನುಮತಿ ನೀಡಿದೆ ಎಂದಿದ್ದಾರೆ. * ಸೆಂಟ್ರಲ್ ಬ್ಯಾಂಕ ಮುದ್ರಿಸುವ ಈ ಹೊಸ ನೋಟುಗಳು ಹೆಚ್ಚಿನ ಭದ್ರತಾ ಚಿನ್ನೆಗಳನ್ನೂ ಹೊಂದಿರಲಿವೆ, ಇದು ನಕಲಿ ನೋಟುಗಳ ಚಲಾವಣೆಗೆ ತಡೆ ಹಾಕಲು ಸಹಾಯವಾಗುವ ಕ್ರಮವಾಗಲಿದೆ ಎಂದಿದ್ದಾರೆ. * ಪ್ರತಿ 5 ವರ್ಷಗಳಿಗೊಮ್ಮೆ ಅಫ್ಘಾನಿಸ್ತಾನ ಬ್ಯಾಂಕ್ ನೋಟುಗಳನ್ನು ಮುದ್ರಿಸುತ್ತದೆ.