Job Description: * ಭಾರತ ಬ್ಯಾಸ್ಕೆಟ್ಬಾಲ್ ತಂಡವು ಸತತ 10 ನೇ ಬಾರಿ ಫಿಬಾ ಏಷ್ಯಾಕಪ್ ಟೂರ್ನಿಗೆ ಅರ್ಹತೆಯನ್ನು ಪಡೆದುಕೊಂಡಿದೆ, ಹಾಗೂ 2023 ರ ವಿಶ್ವಕಪ್ ಟೂರ್ನಿಯ ಕ್ವಾಲಿಫೈಯರ್ಸ್ನಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. * ಇತ್ತೀಚಿಗೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದಿರುವ ಅರ್ಹತಾ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ 61-80 ರಿಂದ ಆಸ್ಟ್ರೇಲಿಯಾ (ಆತಿಥೇಯ) ತಂಡಕ್ಕೆ ಸೋಲ ಒಪ್ಪಿಕೊಂಡಿದೆ, ಆದರೆ ಭಾರತ ತಂಡವು 2 ನೇ ಪಂದ್ಯದಲ್ಲಿ 79-77 ರಿಂದ ಪ್ಯಾಲೆಸ್ಟಿನ್ ತಂಡವನ್ನು ಸೋಲಿಸಿ 'ಎಚ್' ಗುಂಪಿನಲ್ಲಿ 2 ನೇ ಸ್ಥಾನವನ್ನು ಪಡೆದುಕೊಂಡಿದೆ. * ಪ್ರಸ್ತುತ 2022 ರ ಜುಲೈನಲ್ಲಿ ಇಂಡೊನೇಷ್ಯಾದ ಜಕಾರ್ತ ಎಂಬಲ್ಲಿ ಏಷ್ಯಾಕಪ್ ಟೂರ್ನಿಯು ನಿಗದಿಯಾಗಿದೆ. * ಏಷ್ಯಾಕಪ್ ಟೂರ್ನಿಗೆ ಅರ್ಹತೆ ಪಡೆದ ತಂಡಗಳು: ಇಂಡೊನೇಷ್ಯಾ, ಲೆಬನಾನ್, ಬಹರೇನ್, ಪಿಲಿಪ್ಪೀನ್ಸ್, ಕೊರಿಯಾ, ಚೀನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇರಾನ್, ಸಿರಿಯಾ, ಜೋರ್ಡಾನ್, ಕಜಕಸ್ತಾನ ಹಾಗೂ ಸೌದಿ ಅರೇಬಿಯಾ ತಂಡಗಳು.