Job Description: * ಪ್ರಸ್ತುತ ಪೇಪಾಲ್(PayPal) ಹೋಲ್ಡಿಂಗ್ಸ್ ಇಂಕ್ ಯುಕೆನಲ್ಲಿ ಕ್ರಿಪ್ಟೋ ಖರೀದಿ ಮತ್ತು ಮಾರಾಟವನ್ನು ಆರಂಭಿಸಿದೆ, ಹಾಗೂ ಯುಕೆಯಲ್ಲಿ ಗ್ರಾಹಕರಿಗೆ ಈಗ ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ಹಿಡಿದಿಡಲು ಅವಕಾಶ ನೀಡಿದೆ. * ಪ್ರಸ್ತುತ ಪೇಪಾಲ್ ಕ್ರಿಪ್ಟೋಕರೆನ್ಸಿಗಳಿಗೆ ಗ್ರಾಹಕರಿಗೆ ಪ್ರವೇಶವನ್ನು ಒದಗಿಸುವ ಅತಿದೊಡ್ಡ ಮುಖ್ಯವಾಹಿನಿಯ ಹಣಕಾಸು ಕಂಪನಿಯಾಗಿದೆ, ಹಾಗೂ ಇದು ವಿಶ್ವಾದ್ಯಂತ 403 ದಶಲಕ್ಷಕ್ಕೂ ಹೆಚ್ಚು ಸಕ್ರಿಯ ಖಾತೆಗಳನ್ನು ಹೊಂದಿದೆ. * ಪೇಪಾಲ್ ಹೋಲ್ಡಿಂಗ್ಸ್, ಇಂಕ್: ಇದು ಒಂದು ಅಮೇರಿಕದ ಬಹುರಾಷ್ಟ್ರೀಯ ಹಣಕಾಸು ತಂತ್ರಜ್ಞಾನ ಕಂಪನಿಯಾಗಿದೆ, ಈ ಕಂಪನಿಯು ಆನ್ಲೈನ್ ಹಣ ವರ್ಗಾವಣೆಯನ್ನು ಬೆಂಬಲಿಸುತ್ತದೆ ಹಾಗೂ ಆನ್ಲೈನ್ ಪಾವತಿ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. * ಪ್ರಸ್ತುತ ಇದು ಚೆಕ್ಗಳು ಮತ್ತು ಮನಿ ಆರ್ಡರ್ಗಳಂತಹ ಪೇಪರ್ ಗಳಿಗೆ ಪರ್ಯಾಯ ಎಲೆಕ್ಟ್ರಾನಿಕ್ ವಿಧಾನವಾಗಿ ಕಾರ್ಯನಿರ್ವಹಿಸುತ್ತದೆ.