Job Description: * ಈಜಿಪ್ಟ್ ರಾಷ್ಟ್ರವು ಹಮಾಸ್ ಆಡಳಿತಗಾರರೊಂದಿಗಿನ ಉದ್ವಿಗ್ನತೆ ಕಾರಣದಿಂದಾಗಿ ತನ್ನ ಮುಖ್ಯ ಗಡಿ ದಾಟುವ ಸ್ಥಳವನ್ನು ಗಾಜಾ ಪಟ್ಟಿಯೊಂದಿಗೆ ಮುಚ್ಚಿದೆ. * ಮೊದಲ ಬಾರಿಗೆ 2021 ರಲ್ಲಿ ಈ ರಫಾ ಕ್ರಾಸಿಂಗ್ ನ್ನು ಕೆಲಸದ ದಿನದಂದು ಮುಚ್ಚಲಾಯಿತ್ತು, ಮತ್ತೇ 2021 ರ ಮೇ ನಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ 11 ದಿನಗಳ ಯುದ್ಧದ ಸಮಯದಲ್ಲಿ ಈ ದಾಟುವಿಕೆಯನ್ನು ಪುನಃ ತೆರೆಯಲಾಯಿತು. * ಈಜಿಪ್ಟ್ ಅಧಿಕಾರಿಗಳ ನೀಡಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ಇಸ್ರೇಲ್ ಮತ್ತು ಹಮಾಸ್ ನಡುವೆ ದೀರ್ಘಾವಧಿಯ ಕದನ ವಿರಾಮಕ್ಕೆ ಬ್ರೇಕ್ ನೀಡಲು ಗಡಿಯನ್ನು ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ. * ಗಾಜಾ ಪಟ್ಟಿಯು ಮೆಡಿಟರೇನಿಯನ್ ಸಮುದ್ರದ ಪೂರ್ವ ಕರಾವಳಿಯಲ್ಲಿನ ಸ್ವಯಂ ಆಡಳಿತದ ಪ್ಯಾಲೇಸ್ಟಿನಿಯನ್ ಪ್ರದೇಶವಾಗಿದೆ, ಈ ಪ್ರದೇಶವು ಈಜಿಪ್ಟ್ ಹಾಗೂ ಇಸ್ರೇಲ್ ರಾಷ್ಟಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. * ಪ್ರಸ್ತುತ ಗಾಜಾ ಪಟ್ಟಿಯು ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಇಸ್ಲಾಮಿಕ್ ಸಂಘಟನೆಯಾಗಿದೆ, ಹಾಗೂ ಇದು 2006 ರ ಚುನಾವಣೆಯ ನಂತರ ಅಧಿಕಾರವನ್ನು ಪಡೆದುಕೊಂಡು ಆಡಳಿತ ನಡೆಸುತ್ತಿದೆ.