Job Description: * ಪ್ರಸ್ತುತ KSRTC ಸಾರಿಗೆ ಕ್ಷೇತ್ರವು ನೂರಕ್ಕೆ ನೂರರಷ್ಟು ಕನ್ನಡ ಭಾಷೆಯನ್ನು ಬಳಕೆಯನ್ನು ಮಾಡುತ್ತಿದ್ದು, ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಶೆಟ್ಟಿ ತಿಳಿಸಿದ್ದಾರೆ. * ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಾರಿಗೆ ವಲಯದಲ್ಲಿ ಕನ್ನಡ ಅನುಷ್ಠಾನ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿತ್ತು. * ಪ್ರಸ್ತುತ ಕರ್ನಾಟಕ ರಾಜ್ಯದ ಎಲ್ಲ ಸಾರಿಗೆ ವಿಭಾಗದ ಶಾಖೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕನ್ನಡ ಬಳಕೆ ಮಾಡಲಾಗುತ್ತಿದೆ, ಹಾಗೂ ಇದೀಗ ನೌಕರರಿಗೆ ಕನ್ನಡ ಸಾಹಿತ್ಯ ಓದುವ ಅಭಿರುಚಿ ಮೂಡಿಸಲು ಹಾಸನದ ಸಾರಿಗೆ ವಿಭಾಗದಲ್ಲಿ ಕನ್ನಡ ಗ್ರಂಥಾಲಯವನ್ನು ಆರಂಭಿಸಲಾಗಿದೆ. * ಟಿ.ಎಸ್.ನಾಗಾಭರಣ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.