Job Description: * ಇತ್ತೀಚಿಗೆ ತಾಲಿಬಾನ್ ಉಗ್ರರು ಅಪ್ಗಾನಿಸ್ತಾನ ರಾಷ್ಟ್ರವನ್ನು ವಶಪಡಿಸಿಕೊಂಡಿದೆ, ಇದೀಗ ಅಪ್ಗಾನಿಸ್ತಾನದ ಕಾಬೂಲ್ ಪ್ರದೇಶದಿಂದ ಭಾರತೀಯ ನಾಗರಿಕರು ಹಾಗೂ ಅಫ್ಗನ್ ಸಿಖ್ಖರನ್ನು ಮತ್ತು ಹಿಂದೂಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ಭಾರತವು 'ಆಪರೇಷನ್ ದೇವಿ ಶಕ್ತಿ' ಎಂದು ಹೆಸರಿಸಿದೆ. * ಭಾರತ ದೇಶವು ಒಟ್ಟು 78 ಅಫ್ಗನ್ನ ಸಿಖ್ಖರು ಹಾಗೂ ಹಿಂದೂ ಪ್ರಜೆಗಳನ್ನು ತಜಕಿಸ್ತಾನದ ರಾಜಧಾನಿ ದುಶಾಂಬೆಯಿಂದ ಭಾರತಕ್ಕೆ ಕರೆತಂದಿದೆ, ಈ ವಿಷಯದ ಮಾಹಿತಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟರ್ ಮೂಲಕ ತಿಳಿಸಿದ್ದಾರೆ. * ಪ್ರಸ್ತುತ ಭಾರತ ಸರ್ಕಾರವು ಅಪ್ಗಾನಿಸ್ತಾನ ರಾಷ್ಟ್ರದಿಂದ 800 ಕ್ಕೂ ಹೆಚ್ಚು ಜನರನ್ನು ಭಾರತಕ್ಕೆ ಕರೆತಂದಿದೆ.