Job Description: * ಪ್ರಸ್ತುತ ತಮಿಳುನಾಡು ರಾಜ್ಯದಲ್ಲಿ ಆಡಳಿತದಲ್ಲಿರುವ ಡಿಎಂಕೆ ಪಕ್ಷವು, ಇದೀಗ ಡಿಎಂಕೆ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿ ಸ್ಮರಣಾರ್ಥ ಚೆನ್ನೈನ ಮರಿನಾದಲ್ಲಿನ ಕಾಮರಾಜರ್ ಸಲೈನಲ್ಲಿ ಸುಮಾರು 39 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಣೆ ಮಾಡಿದ್ದಾರೆ. * ಪ್ರಸ್ತುತ ತಮಿಳುನಾಡಿನ ಮರೀನಾ ಕಡಲ ತೀರದಲ್ಲಿ 2 ಎಕರೆ 23 ಗುಂಟೆ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. * ಮಾಜಿ ಮುಖ್ಯ ಮಂತ್ರಿ ಎಂ. ಕರುಣಾನಿಧಿ ಅವರು 2018 ರ ಆಗಸ್ಟ್. 7ರಂದು ನಿಧನರಾಗಿದ್ದಾರೆ. * ಕರುಣಾನಿಧಿಯವರು ತಮ್ಮ 80 ವರ್ಷದ ರಾಜಕೀಯ ಜೀವನದಲ್ಲಿ 60 ವರ್ಷ ವಿಧಾನಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.