Job Description: * ಪ್ರಸ್ತುತ ಅಮೇಜಾನ್ ಸಂಸ್ಥೆಯ ವಾಯ್ಸ್ ಅಸಿಸ್ಟೆಂಟ್ ಆಗಿರುವ ವಿದ್ಯುನ್ಮಾನ ಉಪಕರಣ 'ಅಲೆಕ್ಸಾ'ಗೆ ಇನ್ನು ಮುಂದೆ ಸ್ಟಾರ್ ಅಮಿತಾಭ್ ಬಚ್ಚನ್ ಧ್ವನಿಯನ್ನು ಬಳಸಲಾಗುತ್ತದೆ, ಹಾಗೂ ಇದು ಇವರ ಧ್ವನಿಯಲ್ಲಿ ಮಾತನಾಡಲಿದೆ ಎಂದು ಅಮೇಜಾನ್ ಸಂಸ್ಥೆ ತಿಳಿಸಿದೆ. * ಈ ಹಿಂದೆ ಅಮಿತಾಭ್ ಬಚ್ಚನ್ ಅವರು ತಮ್ಮ ಧ್ವನಿಗೆ ಕಾಪಿ ರೈಟ್ ಪಡೆಯಲು ಮುಂದಾಗಿದ್ದರು, ಕಾರಣ ಹಲವಾರು ಮಿಮಿಕ್ರಿ ಕಲಾವಿದರು ಅಮಿತಾಭ್ ಬಚ್ಚನ್ ಅವರ ಅನುಮತಿ ಪಡೆಯದೇ ಅವರ ಧ್ವನಿಯನ್ನು ಬಳಸಿಕೊಂಡು ಜಾಹೀರಾತುಗಳನ್ನು ನೀಡುತಿದ್ದರು, ಇದರಿಂದಾಗಿ ಇವರು ತಮ್ಮ ಧ್ವನಿಗೆ ಕಾಪಿ ರೈಟ್ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. * ಇದೀಗ ಅಮೇಜಾನ್ ಸಂಸ್ಥೆಯ ಅಮಿತಾಭ್ ಬಚ್ಚನ್ ಅವರು ಧ್ವನಿಯನ್ನು ಅಲೆಕ್ಸಾ ಉಪಕರಣಕ್ಕಾಗಿ ಬಳಸಲು ಖರೀದಿಸಿದೆ. * ಈ ಮೊದಲು ಈ ಅಲೆಕ್ಸಾ ಉಪಕರಣವು ಚಾಲೂ ಮಾಡಬೇಕಾದರೆ ಬಳಕೆದಾರರು 'ಅಲೆಕ್ಸಾ' ಎಂದು ಕರೆಯಬೇಕಾಗಿತ್ತು, ಆದರೆ ಇನ್ನುಮುಂದೆ 'ಅಮಿತ್ ಜೀ' ಎಂದು ಕರೆಯಬೇಕಾಗುತ್ತದೆ ಎಂದು ಅಮೆಜಾನ್ ಸಂಸ್ಥೆ ತಿಳಿಸಿದೆ.