Job Description: * ಪ್ರಸ್ತುತ ದೇಶದಲ್ಲಿ ತುರ್ತು ಬಳಕೆ ಅನುಮೋದನೆಗಾಗಿ ಭಾರತೀಯ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿಯು ಅಹ್ಮದಾಬಾದ್ ನಗರದ ಔಷಧೀಯ ಸಂಸ್ಥೆ ಕ್ಯಾಡಿಲಾ ಹೆಲ್ತ್ಕೇರ್ ಮೂರು-ಡೋಸ್ ಕೋವಿಡ್-19 ಲಸಿಕೆ ZyCoV-D ಯನ್ನು ಶಿಫಾರಸ್ತು ಮಾಡಿದೆ. * ಈ ಹಿಂದೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ನ ಕೊವಾಕ್ಸಿನ್ನ ಲಸಿಕೆಯ ನಂತರ ಭಾರತದಲ್ಲಿ ತುರ್ತುಸ್ಥಿತಿ ಅಧಿಕಾರವನ್ನು ಪಡೆದ 2 ನೇ ದೇಶಿಯ ಜಬ್ ಝೈಡಸ್ ಕ್ಯಾಡಿಲಾ ಲಸಿಕೆ ಇದಾಗಿದೆ. * ಪ್ರಸ್ತುತ ಝೈಡಸ್ ಕ್ಯಾಡಿಲಾ ಮೂರು-ಡೋಸ್ ಪ್ಲಾಸ್ಮಿಡ್ DNA ಕೋವಿಡ್ -19 ಲಸಿಕೆಯನ್ನು ಬಳಕೆ ಮಾಡಲು ಅನುಮೋದನೆ ಪಡೆದುಕೊಂಡ SARS-CoV-2 ಸೋಂಕಿನ ವಿರುದ್ಧ ಮಾನವ ಬಳಕೆಗಾಗಿ ZyCov-D ವಿಶ್ವದ ಮೊದಲ ಪ್ಲಾಸ್ಮಿಡ್ DNA ಲಸಿಕೆ ಇದಾಗಿದೆ. * ZyCov-D ವಿಶ್ವದ ಮೊದಲ ಪ್ಲಾಸ್ಮಿಡ್ DNA ಲಸಿಕೆಯು 12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ. * ಈ ZyCoV-D ಭಾರತದ ಮೊದಲ DNA ಪ್ಲಾಸ್ಮಿಡ್ ಲಸಿಕೆಯಾಗಿದೆ, ಇದನ್ನು ಅಹಮದಾಬಾದ್ನ ಲಸಿಕೆ ತಂತ್ರಜ್ಞಾನ ಕೇಂದ್ರದಲ್ಲಿ ತಯಾರಿಸಲಾಗಿದೆ. * 2020 ರ ಡಿಸೆಂಬರ್ ತಿಂಗಳಿನಲ್ಲಿ ಜೈಡಸ್ ಗ್ರೂಪ್ ಅಧ್ಯಕ್ಷ ಪಂಕಜ್ ಆರ್ ಪಟೇಲ್ ಅವರು ಈ ಲಸಿಕೆಯ ಪ್ರಯೋಗದ ಮೊದಲ ಎರಡು ಹಂತಗಳು 'ಸುರಕ್ಷಿತ ಮತ್ತು ಇಮ್ಯುನೊಜೆನಿಕ್' ವಾಗಿದೆ ತಿಳಿಸಿದ್ದರು.