Job Description: * ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಅವರ ವಕ್ತಾರರಾಗಿರುವ ಸ್ಟೇಫನ್ ದುಜಾರಿಕ್ ಅವರು ನೀಡಿರುವ ಮಾಹಿತಿಯ ಪ್ರಕಾರ ಪ್ರಸ್ತುತ ಅಫ್ಗಾನಿಸ್ತಾನ ರಾಷ್ಟ್ರದಲ್ಲಿರುವ ಈಗಿನ ಪರಿಸ್ಥಿತಿ ಹಾಗೂ ಭದ್ರತೆಯ ದೃಷ್ಟಿಯಿಂದ 100 ಸಿಬ್ಬಂದಿಯನ್ನು ಕಜಕಸ್ತಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ. * ಪ್ರಸ್ತುತ ಕಜಕಸ್ತಾನದ ಅಲ್ಮಾಟಿ ನಗರದಲ್ಲಿ ಅಫ್ಗಾನಿಸ್ತಾನದ ವಿಶ್ವಸಂಸ್ಥೆಯ ತಾತ್ಕಾಲಿಕ ಕಚೇರಿಯನ್ನು ಸ್ಥಾಪಿಸಲು ಅವಕಾಶವನ್ನು ನೀಡಲಾಗಿದೆ, ಸದ್ಯದ ಪರಿಸ್ಥಿತಿಯಲ್ಲಿ ಅಧಿಕಾರಿಗಳು ಈ ನಗರದಿಂದಲೇ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.