Job Description: * ಪ್ರಸ್ತುತ 'ಲಿವ್ ಇನ್' ರಿಲೇಶನ್ಶಿಪ್ನಲ್ಲಿದ್ದ ಇಬ್ಬರು ಯುವತಿಯರು ಒಟ್ಟಿಗೆ ವಾಸಿಸಲು ಉತ್ತರ ಪ್ರದೇಶದ ರಾಂಪುರದ ನ್ಯಾಯಾಲಯವು ಅನುಮತಿ ನೀಡಿದೆ. * ಶಹಬಾದ್ ಪೊಲೀಸರು ಮಾಹಿತಿ ನೀಡಿರುವ ಪ್ರಕಾರ, ಒಂದು ತಿಂಗಳ ಹಿಂದೆ ಕಾಣೆಯಾಗಿದ್ದ ಅಂದಾಜು 20 ವರ್ಷ ವಯಸ್ಸಿನ ಯುವತಿಯು ರಾಂಪುರದ ಶಹಬಾದ್ ಪ್ರದೇಶದಲ್ಲಿ ತನ್ನ 'ಗೆಳತಿ' ಮನೆಯಲ್ಲಿ ವಾಸವಾಗಿದ್ದಳು, ಆದರೆ ಆ ಯುವತಿಯ ಕುಟುಂಬವು ಜುಲೈ ತಿಂಗಳಿನಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು ಎಂದು ತಿಳಿಸಿದ್ದಾರೆ. * ಶಹಬಾದ್ನ ತನ್ನ ಗೆಳತಿಯ ಮನೆಯಲ್ಲಿ ಪತ್ತೆಯಾಗಿರುವ ಯುವತಿಯು ತನ್ನ ಸ್ವಇಚ್ಛೆಯಿಂದ ಸ್ನೇಹಿತೆಯೊಂದಿಗೆ ಸಂಬಂಧ ಹೊಂದಿದ್ದಾನೆ, ಹಾಗೂ ಈ ಕಾರಣಕ್ಕಾಗಿ ಮನೆ ತೊರೆದಿದ್ದೇನೆ ಎಂದು ತಿಳಿಸಿದ್ದಾಳೆ. * ಇವರಿಬ್ಬರನ್ನು ರಾಂಪುರದ ನ್ಯಾಯಾಲಯದ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿತ್ತು, ಇವರಿಬ್ಬರು 18 ವರ್ಷಕ್ಕಿಂತ ಮೇಲ್ಪಟ್ಟಿದ್ದಾರೆ, ಹಾಗೂ ಸ್ವಇಚ್ಛೆಯಿಂದ ಜೊತೆಗಿರಲು ನಿರ್ಧರಿಸಿದ್ದಾರೆ ಈ ಕಾರಣದಿಂದ ನ್ಯಾಯಾಲಯವು ಇವರಿಬ್ಬರು ಒಟ್ಟಿಗೆ ಇರಲು ಅನುಮತಿ ನೀಡಲಾಗುತ್ತಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ ಎಂದು ತಿಳಿದು ಬಂದಿದೆ.