Job Description: * ಪ್ರಸ್ತುತ ಪಶ್ಚಿಮ ಆಫ್ರಿಕಾದ ರಾಷ್ಟ್ರವಾದ ಬುರ್ಕಿನೊ ಫಾಸೊದಲ್ಲಿ ಶಂಕಿತ ಜಿಹಾದಿಗಳ ಗುಂಪೊಂದು ಗುಂಡಿನ ದಾಳಿಯನ್ನು ನಡೆಸಿದೆ, ಈ ದಾಳಿಯಲ್ಲಿ 30 ನಾಗರಿಕರೂ ಸೇರಿದಂತೆ ಒಟ್ಟಾರೆ 47 ಜನರು ಸಾವನ್ನಪಿದ್ದಾರೆ, ಈ ಕಾರಣದಿಂದಾಗಿ ಅಲ್ಲಿನ ಅಧ್ಯಕ್ಷರು ಮೂರು ದಿನಗಳ ಕಾಲ ರಾಷ್ಟ್ರೀಯ ಶೋಕವನ್ನು ಘೋಷಣೆ ಮಾಡಿದ್ದಾರೆ. * ಶಂಕಿತ ಜಿಹಾದಿಗಳು ನಡೆಸಿರುವ ದಾಳಿಯಲ್ಲಿ 14 ಜನ ಸೈನಿಕರಿದ್ದಾರೆ ಎಂದು ಸರ್ಕಾರ ಹೇಳಿದೆ, ಅಲ್ಲದೆ ಅವರ ವಿರುದ್ಧ ಭದ್ರತಾ ಸೇನಾ ಪಡೆಗಳು ನಡೆಸಿರುವ ಗುಂಡಿನ ಚಕಮಕಿಯಲ್ಲಿ 58 ಉಗ್ರರು ಹತರಾಗಿದ್ದಾರೆ, ಇನ್ನು ರಕ್ಷಣಾ ಚಟುವಟಿಕೆಗಳು ನಡೆದಿವೆ ಎಂದು ಸರ್ಕಾರ ಮಾಹಿತಿ ನೀಡಿದೆ. * ಈ ರಾಷ್ಟ್ರದಲ್ಲಿ ಇದು 3 ನೇ ದಾಳಿ ಪ್ರಕರಣವಾಗಿದೆ, ಈ ಮೊದಲು ಆಗಸ್ಟ್ 4 ರಂದು ನದೆಡೆದಿತ್ತು, ಅದಕ್ಕೂ ಮುಂಚಿತವಾಗಿ ಅಂದರೆ ಜೂನ್ 4-5 ರಂದು ಸೊಲ್ಹಾನ್ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿತ್ತು ಎಂದು ಮಾಹಿತಿ ತಿಳಿದು ಬಂದಿದೆ.