Job Description: * ಪ್ರಸ್ತುತ 2021 ರ ಅಂತ್ಯದ ವೇಳೆಗೆ ಯುನೈಟೆಡ್ ಕಿಂಗ್ಡಮ್ (UK) ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಮಾತುಕತೆಯನ್ನು ಪ್ರಾರಂಭಿಸಲಿದೆ. * ಭಾರತ ಮತ್ತು ಯುಕೆ ಮುಕ್ತ ವ್ಯಾಪಾರ ಒಪ್ಪಂದದ ಸಂಧಾನ ಪೂರ್ವ ಸ್ಕೋಪಿಂಗ್ ಹಂತದಲ್ಲಿದೆ, ಹಾಗೂ 2021 ರ ಅಂತ್ಯದ ವೇಳೆಗೆ ಮಾತುಕತೆಗಳು ಆರಂಭವಾಗುತ್ತವೆ. * ಭಾರತ ಮತ್ತು ಯುಕೆ 2019 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವು 23 ಬಿಲಿಯನ್ ಪೌಂಡ್ಗಳ ಮೌಲ್ಯವನ್ನು ಹೊಂದಿತ್ತು. * ಬ್ರಿಟನ್ ರಾಷ್ಟ್ರವು 2020 ರಲ್ಲಿ ಯುರೋಪಿಯನ್ ಒಕ್ಕೂಟದಿಂದ ನಿರ್ಗಮಿಸಿದೆ, ಇದೀಗ ರಾಷ್ಟ್ರವು ವ್ಯಾಪಾರ ಒಪ್ಪಂದಗಳನ್ನು ಭದ್ರಪಡಿಸಿಕೊಳ್ಳಲು ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ರಾಷ್ಟ್ರಗಳೊಂದಿಗಿನ ತನ್ನ ಸಂಬಂಧವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ. * ಭಾರತ-ಯುಕೆ ಮಧ್ಯಂತರ ವ್ಯಾಪಾರ ಒಪ್ಪಂದದಿಂದ ಸ್ಕಾಚ್ ಹಾಗೂ ವಿಸ್ಕಿಯಂತಹ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸುತ್ತದೆ, ಹಾಗೂ ಭಾರತೀಯ ಉತ್ಪಾದಕರು ಅಕ್ಕಿಯಂತೆ ಯುಕೆ ಮಾರುಕಟ್ಟೆಗೆ ಹೆಚ್ಚಿನ ಪ್ರವೇಶವನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ. * 2020 ರಲ್ಲಿ ಭಾರತ-ಯುಕೆ ದ್ವಿಪಕ್ಷೀಯ ವ್ಯಾಪಾರವು 18.3 ಬಿಲಿಯನ್ ಆಗಿತ್ತು, ಪ್ರಸ್ತುತ ಯುಕೆಯಲ್ಲಿ ಸುಮಾರು 842 ಭಾರತೀಯ ಕಂಪನಿಗಳಿವೆ 110,000 ಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ನೀಡುತ್ತಿದೆ.