Job Description: * ಪ್ರಸ್ತುತ ಚೀನಾ ದೇಶವು ಅಂತರ್ಜಾಲ ಕಂಪನಿಗಳ ಸ್ಪರ್ಧಾತ್ಮಕ ಅಭ್ಯಾಸಗಳ ಬಗೆಗಿನ ಹೊಸ ಕರಡು ನಿಯಮಗಳನ್ನು ಹೊರಡಿಸಿದೆ. * ಚೀನಾ ದೇಶದ ಈ ಹೊಸ ಮಾರ್ಗಸೂಚಿ ಅಂತರ್ಜಾಲ ಕಂಪನಿಗಳು ಪ್ರತಿಸ್ಪರ್ಧಿ ಪ್ಲಾಟ್ಫಾರ್ಮ್ಗಳನ್ನು ಅನ್ಯಾಯದ ಅಭ್ಯಾಸದಲ್ಲಿ ಸೇರದಂತೆ ತಡೆಯಲು ಪ್ರಯತ್ನಿಸುತ್ತದೆ, ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ಚೀನಾ ಪ್ರಯತ್ನಿಸುತ್ತಿದೆ. * ಚೀನಾ ದೇಶದ ಈ ಹೊಸ ಮಾರ್ಗಸೂಚಿಗಳು: ಈ ಹಿಂದೆ 2021 ರ ಆಗಸ್ಟ್. 17 ರಂದು ಟೆಕ್ ಕಂಪನಿಗಳ ಷೇರುಗಳು ಕುಸಿತ ಕಂಡವು ಅಲ್ಲದೇ ಒಂದು ತಿಂಗಳ ಅವಧಿಯ ಕುಸಿತವನ್ನು ವಿಸ್ತರಿಸಿದವು, ಪ್ರಸ್ತುತ ಅಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ನ ಪಾಲು 4.8% ರಷ್ಟು ಕುಸಿತವನ್ನು ಕಂಡಿದೆ, ಹಾಗೂ ಟೆನ್ಸೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ನ ಪಾಲು 4% ರಷ್ಟು ಕುಸಿತವನ್ನು ಕಂಡಿದೆ. * ಪ್ರಸ್ತುತ ಮಾರುಕಟ್ಟೆ ನಿಯಂತ್ರಕದ ಪ್ರಕಾರ, ಅಂತರ್ಜಾಲ ಕಂಪನಿಗಳನ್ನು ಗುರಿಯಾಗಿಸಿಕೊಂಡು ಅನ್ಯಾದ ವಿರುದ್ಧ ಹೋರಾಡಲು ಈ ಹೊಸ ನಿಯಮಗಳು ಕಾನೂನನ್ನು ತರಲು ಚೀನಾ ಪ್ರಯತ್ನಪಡುತ್ತಿದೆ.