Job Description: * ಭಾರತೀಯ ನೌಕಾಪಡೆ ಮತ್ತು ವಿಯೆಟ್ನಾಂ ಪೀಪಲ್ಸ್ ನೌಕಾಪಡೆಯ ಈ ಎರಡು ಉಭಯ ದೇಶಗಳು ದಕ್ಷಿಣ ಚೀನಾ ಸಮುದ್ರದಲ್ಲಿ ಜಂಟಿ ಸಮರಾಭ್ಯಾಸವನ್ನು ನಡೆಸಿವೆ. * ಭಾರತೀಯ ನೌಕಾಪಡೆಯ INS ರಣವಿಜಯ್ ಮತ್ತು INS ಕೋರಾ ದ್ವಿಪಕ್ಷೀಯ ಕಡಲ ಜಂಟಿ ಸಮರಾಭ್ಯಾಸವನ್ನು ನಡೆಸಿವೆ. * ವಿಯೆಟ್ನಾಂ ದೇಶದ ಫ್ರಿಗೇಟ್ VPNS ಲೈ ಥಾಯ್ ಟು (HQ-012) ಈ ಸಮರಾಭ್ಯಾಸದಲ್ಲಿ ಭಾಗಿಯಾಗಿತ್ತು. * ಈ ದ್ವಿಪಕ್ಷೀಯ ಮಿಲಿಟರಿ ವ್ಯಾಯಾಮವು ಎರಡು ದೇಶಗಳ ನೌಕಾಪಡೆಗಳ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ಮಹತ್ವದ ಹೆಜ್ಜೆಯಾಗಿದೆ. * ಭಾರತ ಮತ್ತು ವಿಯೆಟ್ನಾಂ ದೇಶಗಳು ಜಂಟಿ ಸಮರಾಭ್ಯಾಸದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗಳು ಮತ್ತು ಶಸ್ತ್ರಾಸ್ತ್ರಗಳ ಫೈರಿಂಗ್ ಡ್ರಿಲ್ಗಳನ್ನು ಬಳಸಿಕೊಂಡು ವ್ಯಾಯಾಮ ನಡೆಸಿದ್ದವು. * INS ರಣವಿಜಯ್ ಇದು ಮಾರ್ಗದರ್ಶಿ-ಕ್ಷಿಪಣಿ ವಿಧ್ವಂಸಕವಾಗಿದೆ, ಇದನ್ನು 1987 ರ ಡಿಸೆಂಬರ್. 21 ರಂದು ಭಾರತೀಯ ನೌಕಾಪಡೆಗೆ ನಿಯೋಜನೇ ಮಾಡಲಾಗಿದೆ. * INS ಕೋರಾ: ಕೋರಾ ವರ್ಗದ ಕ್ಷಿಪಣಿ ಕಾರ್ವೆಟ್'ನ ಮುಖ್ಯವಾದ ಹಡಗಾಗಿದೆ, ಹಾಗೂ ಇದು ಮೇಲ್ಮೈಯಿಂದ ಮೇಲ್ಮೈಗೆ ಕ್ಷಿಪಣಿಗಳು ಮತ್ತು ವಾಯು ವಿರೋಧಿ ಬಂದೂಕುಗಳನ್ನು ಒಳಗೊಂಡಿರುತ್ತದೆ.