Job Description: * ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ '13' ವರ್ಷಗಳನ್ನೂ ಪೂರೈಸಿದ್ದಾರೆ, ಈ ಮೊದಲು ನಾಯಕ ವಿರಾಟ್ ಕೊಹ್ಲಿ ಅವರು 19 ನೇ ವರ್ಷ ವಯಸ್ಸಿನಲ್ಲಿ ಅಂದರೆ 2008 ರ ಆಗಸ್ಟ್. 18 ರಂದು ಶ್ರೀಲಂಕಾ ವಿರುದ್ಧ ಡಂಬುಲಾದಲ್ಲಿ ಏಕದಿನ ಪಂದ್ಯ ಆಡುವ ಮೂಲಕ ಭಾರತ ತಂಡದಕ್ಕೆ ಪದಾರ್ಪಣೆ ಮಾಡಿದ್ದರು. * ಪ್ರಸ್ತುತ ನಾಯಕ ವಿರಾಟ್ ಕೊಹ್ಲಿ ಅವರು ಇದೀಗ ವಿಶ್ವದ ಸ್ಟಾರ್ ಬ್ಯಾಟ್ಸ್ಮನ್ ಆಗಿದ್ದಾರೆ, '13' ವರ್ಷಗಳಲ್ಲಿ 438 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಟವಾಡಿ 22,937 ರನ್ ಕಲೆಹಾಕಿದ್ದಾರೆ, ಈ ಸಾಧನೆಗೆ BCCI ಟ್ವಿಟರ್ ಮೂಲಕ ಅಭಿನಂದನೆಯನ್ನು ತಿಳಿಸಿದೆ. * ನಾಯಕ ವಿರಾಟ್ ಕೊಹ್ಲಿ ಅವರು 2008 ರ ಅಂಡರ್- 19 ತಂಡದ ನಾಯಕರಾಗಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದರು, ಮತ್ತೇ 2011 ರ ಏಕದಿನ ವಿಶ್ವಕಪ್ ವಿಜೇತ ತಂಡದ ಆಟಗಾರರಾಗಿದ್ದರು. * ವಿರಾಟ್ ಕೊಹ್ಲಿ ಸತತ 7 ವರ್ಷಗಳಿಂದ ಭಾರತ ತಂಡದ ನಾಯಕರಾಗಿದ್ದಾರೆ. * ನಾಯಕ ವಿರಾಟ್ ಕೊಹ್ಲಿ ಅವರು ಇಲ್ಲಿಯವರೆಗೆ ಒಟ್ಟಾರೆ 94 ಟೆಸ್ಟ್, 254 ಏಕದಿನ ಹಾಗೂ 90 ಟಿ20 ಪಂದ್ಯಗಳನ್ನು ಆಡಿದ ಹಿರಿಮೇ ಇವರಿಗಿದೆ.