Job Description: * ಕೊರೊನಾ ವೈರಸ್ʼನ ಡೆಲ್ಟಾ ರೂಪಾಂತರದಿಂದ ಸೋಂಕುಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಮುಂದಿನ ಸೆಪ್ಟಂಬರ್ 20 ರಿಂದ ಎಲ್ಲಾ ಅಮೆರಿಕನ್ ಪ್ರಜೆಗಳಿಗೆ ಕೋವಿಡ್-19 ಲಸಿಕೆ ಬೂಸ್ಟರ್ ಶಾಟ್ ಗಳನ್ನು ಎಲ್ಲೆಡೇ ಲಭ್ಯವಾಗುವಂತೆ ಮಾಡಲು ಅಮೆರಿಕ ಸರ್ಕಾರವು ಯೋಜಿಸಿದೆ. * ಸುಮಾರು ಎಂಟು ತಿಂಗಳ ಹಿಂದೆ ತಮ್ಮ ಮೊದಲನೇ ಚುಚ್ಚುಮದ್ದು ಸ್ವೀಕರಿಸಿದ ಎಲ್ಲಾ ಅಮೆರಿಕನ್ ಪ್ರಜೆಗಳಿಗೆ ಸೆಪ್ಟಂಬರ್ 20ರಿಂದ 3 ನೇ ಬೂಸ್ಟರ್ ಶಾಟ್'ನ್ನು ನೀಡಲು ಅಮೇರಿಕದ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಇಲಾಖೆ ಸಿದ್ಧವಾಗಿದೆ ಎಂದು ಶ್ವೇತಭವನ ತಿಳಿಸಿದೆ. * ಆರಂಭದಲ್ಲಿ ಈ ಬೂಸ್ಟರ್ ಶಾಟ್ ಗಳನ್ನು ಮೊದಲು ಆರೋಗ್ಯ ಕಾರ್ಯಕರ್ತರು, ನರ್ಸಿಂಗ್ ಹೋಂ ನಿವಾಸಿಗಳು ಮತ್ತು ವೃದ್ಧರಿಗೆ ನೀಡಲಾಗುತ್ತದೆ ಎಂದು ಶ್ವೇತಭವನ ತಿಳಿಸಿದೆ.