Job Description: * ಸಾಮಾಜಿಕ ಜಾಲತಾಣವಾಗಿರುವ ಫೇಸ್ಬುಕ್ ಇದೀಗ ತಾಲಿಬಾನ್ ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಿ ತದನಂತರ ತಾಲಿಬಾನ್ ಬೆಂಬಲಿಸುವ ಎಲ್ಲಾ ವಿಷಯಗಳನ್ನು ಅದರ ವೇದಿಕೆಗಳಿಂದ ನಿಷೇಧಿಸಿದೆ. * ಪ್ರಸ್ತುತ ಇಸ್ಲಾಮಿಕ್ ದಂಗೆಕೋರ ಗುಂಪಿಗೆ ಸಂಬಂಧಿಸಿದ ವಿಷಯವನ್ನು ಮೇಲ್ವಿಚಾರಣೆ ಮತ್ತು ತೆಗೆದುಹಾಕುವ ಅಫಘಾನ್ ತಜ್ಞರ ಸಮರ್ಪಿತ ತಂಡವನ್ನು ಫೇಸ್ಬುಕ್ ಹೊಂದಿದೆ. * ಫೇಸ್ಬುಕ್ ತನ್ನ ಸೇವೆಯನ್ನು ಡೇಂಜರಸ್ ಆರ್ಗನೈಸೇಶನ್ ಪಾಲಿಸಿಗಳ ಅಡಿಯಲ್ಲಿ ತಾಲಿಬಾನ್ ಬೆಂಬಲಿಸುವ ಎಲ್ಲಾ ವಿಷಯಗಳನ್ನು ನಿಷೇಧಿಸಿದೆ, ಹಾಗೂ ಈ ನೀತಿಯ ಅಡಿಯಲ್ಲಿ ತಾಲಿಬಾನಿಗಳ ಪರವಾಗಿ ಬೆಂಬಲ ಮತ್ತು ಅವರನ್ನು ಪ್ರತಿನಿಧಿಸುವ ಖಾತೆಯನ್ನು ತೆಗೆದುಹಾಕಲಾಗುತ್ತದೆ ಎಂದು ತಿಳಿಸಿದೆ. * ಈ ನೀತಿಯನ್ನು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸ್ ಆಪ್ ನಂತಹ ಎಲ್ಲಾ ಪ್ಲಾಟ್ಫಾರ್ಮ್ಗಳಿಗೆ ಅನ್ವಯಿಸಲಾಗುತ್ತದೆ. * 2021 ರಲ್ಲಿ ಫೇಸ್ಬುಕ್ನ ಉನ್ನತ ಮಟ್ಟದ ನಿರ್ಧಾರಗಳು ತಗೆದುಕೊಂಡಿದೆ, ಉದಾಹರಣೆಗೆ: ಹಿಂಸಾಚಾರವನ್ನು ಪ್ರಚೋದಿಸಿದ್ದಕ್ಕಾಗಿ ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಿರ್ಬಂಧಿಸಿತ್ತು, ಹಾಗೂ ದೇಶದಲ್ಲಿ ದಂಗೆಯ ನಂತರ ಮ್ಯಾನ್ಮಾರ್ ಮಿಲಿಟರಿಯನ್ನು ನಿಷೇಧಿಸಿತ್ತು. * ಸಾಮಾಜಿಕ ಜಾಲತಾಣ ಫೇಸ್ಬುಕ್ ಅಮೇರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿದೆ, ಇದು ತನ್ನ ಪ್ರಧಾನ ಕಚೇರಿಯನ್ನು ಕ್ಯಾಲಿಫೋರ್ನಿಯಾದ ಮೆನ್ಲೊ ಪಾರ್ಕ್ ನಲ್ಲಿ ಹೊಂದಿದೆ. * ಸಾಮಾಜಿಕ ಜಾಲತಾಣ ಫೇಸ್ಬುಕ್ ನ್ನು 2004 ರಲ್ಲಿ 'ದಿ ಫೇಸ್ಬುಕ್' ಎಂದು ಸ್ಥಾಪನೆ ಮಾಡಲಾಗಿದೆ, ಹಾಗೂ ಇದು 2021 ರ ಹೊತ್ತಿಗೆ 2.9 ಬಿಲಿಯನ್ ಮಾಸಿಕ ಬಳಕೆದಾರರನ್ನು ಹೊಂದಿದೆ. * ಈ ಫೇಸ್ಬುಕ್ 2012 ರಲ್ಲಿ ಇನ್ಸ್ಟಾಗ್ರಾಮ್ ಹಾಗೂ 2014 ರಲ್ಲಿ ವಾಟ್ಸಾಪ್ ಮತ್ತು ಆಕ್ಯುಲಸ್ ಅನ್ನು ಸ್ವಾಧೀನಪಡಿಸಿಕೊಂಡಿದೆ.