Job Description: * ಛತ್ತೀಸಗಢ ಸರ್ಕಾರವು 'ರಾಜೀವ್ ಗಾಂಧಿ ಗ್ರಾಮೀಣ ಭೂಮಿನ್ ಮಜ್ದೂರ್ ನ್ಯಾಯ ಯೋಜನೆ' ಯನ್ನು ಆರಂಭಿಸಿದೆ ಇದರ ಅಡಿಯಲ್ಲಿ 12 ಲಕ್ಷ ಭೂರಹಿತ ಕಾರ್ಮಿಕರಿಗೆ 6000 ರೂ. ನೀಡಲಿದೆ ಎಂದು ತಿಳಿಸಿದೆ. * ಈ ಯೋಜನೆಯನ್ನು ಛತ್ತೀಸಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಈ ಹಿಂದೆ ಜುಲೈ. 28 ರಂದು ರಾಜ್ಯ ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದರು, ಹಾಗೂ 2021-2022 ಹಣಕಾಸು ವರ್ಷದ ಪೂರಕ ಬಜೆಟ್ ನಲ್ಲಿ ಈ ಯೋಜನೆಗೆ ಮಂಜೂರಾದ ಮೊತ್ತವನ್ನು ಸೇರಿಸಿದ್ದಾರೆ. * ಪ್ರಸ್ತುತ ಛತ್ತೀಸಗಢ ಸರ್ಕಾರವು 200 ಕೋಟಿ ರೂ. ಒದಗಿಸುವ ಮೂಲಕ ಈ ಯೋಜನೆಯನ್ನು ಪ್ರಾರಂಭಿಸಿದೆ, ಇದರಿಂದಾಗಿ 12 ಲಕ್ಷ ಭೂರಹಿತ ಕುಟುಂಬಗಳಿಗೆ ಸಹಾಯವಾಗಲಿದೆ ಎಂದಿದೆ. * ಈ ಯೋಜನೆಯು ಗ್ರಾಮೀಣ ಭೂರಹಿತ ಕಾರ್ಮಿಕರಿಗೆ ಕನಿಷ್ಠ ವೇತನದ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ, 2022 ರ ಮಾರ್ಚ್. 31 ರ ಮೊದಲು ಫಲಾನುಭವಿಗಳು ತಮ್ಮ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದಿದ್ದಾರೆ. * ಛತ್ತೀಸಗಢ ಸರ್ಕಾರದ ಈ ಯೋಜನೆಯ ರಾಜ್ಯದಲ್ಲಿನ ಕ್ಷೌರಿಕರು, ಕಮ್ಮಾರರು, ಬಟ್ಟೆ ತೊಳೆಯುವವರು ಹಾಗೂ ಬಟ್ಟೆ ತೊಳೆಯುವ ಮಹಿಳೆಯರು, ಹಾಗೂ ಪುರೋಹಿತರಂತಹ ಫಲಾನುಭವಿಗಳಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.