Job Description: * ಪ್ರಸ್ತುತ ನೈರೋಬಿಯಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಅಂಡರ್-20 ಚಾಂಪಿಯನ್ಶಿಪ್ ನಲ್ಲಿ ಭಾರತದ 4x400 ಮೀ. ಮಿಶ್ರ ರಿಲೇ ತಂಡವು ಕಂಚಿನ ಪದಕವನ್ನು ಜಯಿಸಿದೆ. * ಪ್ರಸ್ತುತ ಭಾರತವು ವಿಶ್ವ ಅಂಡರ್-20 ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ ಇತಿಹಾಸದಲ್ಲಿ 5 ನೇ ಪದಕವನ್ನು ಜಯಿಸಿದಂತಾಗಿದೆ. * ನೈಜೀರಿಯಾ ತಂಡವು ಚಿನ್ನದ ಪದಕವನ್ನು ಜಯಿಸಿದೆ. * ಪೋಲ್ಯಾಂಡ್ ತಂಡವು ಬೆಳ್ಳಿ ಪದಕವನ್ನು ಜಯಿಸಿದೆ. * ಈ ಮೊದಲು ಭಾರತವು ವಿಶ್ವ ಅಂಡರ್ -20 ಕ್ರೀಡಾಕೂಟದಲ್ಲಿ ಸೀಮಾ ಆಂಟಿಲ್ ಡಿಸ್ಕಸ್ ಥ್ರೋ,2002 ರಲ್ಲಿ ಕಂಚು , ನವಜೀತ್ ಕೌರ್ ಧಿಲ್ಲೋನ್ 2014 ರಲ್ಲಿ ಡಿಸ್ಕಸ್ ಥ್ರೋನಲ್ಲಿ ಕಂಚು, ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ 2016'ರ ಜಾವೆಲಿನ್ ಥ್ರೋನಲ್ಲಿ ಚಿನ್ನ, ಹಾಗೂ ಹಿಮಾ ದಾಸ್ 2018 ರಲ್ಲಿ 400 ಮೀ, ಓಟದಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ.