Job Description: * ಪ್ರಸ್ತುತ ಮಲೇಷ್ಯಾದ ಪ್ರಧಾನಿ ಮುಹಿದ್ದೀನ್ ಯಾಸೀನ್ ಅವರು ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಿಂದ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. * ಮಲೇಷ್ಯಾ ಪ್ರಧಾನಿ ಮುಹಿದ್ದೀನ್ ನೇತೃತ್ವದ ಮೈತ್ರಿ ಸರ್ಕಾರದಲ್ಲಿನ ಯುಎಂಎನ್ಒ ಪಕ್ಷವು ತನ್ನ ಬೆಂಬಲವನ್ನು ಹಿಂದಕ್ಕೆ ಪಡೆದಿದೆ, ಅಲ್ಲದೇ ಇಬ್ಬರು ಸದಸ್ಯರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಈ ಕಾರಣದಿಂದಾಗಿ ಪ್ರಧಾನಿ ಮುಹಿದ್ದೀನ್ ಯಾಸೀನ್ ಅವರು ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾಗಿ ರಾಜೀನಾಮೆ ನೀಡಲು ಸಿದ್ಧವಾಗಿದ್ದಾರೆ. * ಪ್ರಧಾನಿ ಮುಹಿದ್ದೀನ್ ಯಾಸೀನ್ ಅವರು ಮಲೇಷ್ಯಾ ಅರಮನೆಗೆ ತೆರಳಿ ರಾಜನಿಗೆ ರಾಜೀನಾಮೆ ಪತ್ರ ನೀಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿಯ ಸಚಿವ ಮೊಹಮ್ಮದ್ ರೆಜುವಾನ್ ಮೊಹಮ್ಮದ್ ಯೂಸುಫ್ ಈ ಮಾಹಿತಿಯನ್ನು ನೀಡಿದ್ದಾರೆ.