Job Description: * ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಉಪಗ್ರಹ ಫೋನ್ಗಳನ್ನು ಹೊಂದಿದ ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವಾಗಿದೆ, ಪ್ರಸ್ತುತ ಅಸ್ಸಾಂ ಮುಖ್ಯ ಕಾರ್ಯದರ್ಶಿ ಜಿಷ್ಣು ಬರುವಾ ಅವರು ಸುಮಾರು 10 ಉಪಗ್ರಹ ಫೋನ್'ಗಳನ್ನು ಕಾಜಿರಂಗ ರಾಷ್ಟ್ರೀಯ ಉದ್ಯಾನದ ಅರಣ್ಯ ಸಿಬ್ಬಂದಿಗಳಿಗೆ ನೀಡಿದ್ದಾರೆ. * ಉಪಗ್ರಹ ಫೋನ್ ಕ್ರಮವು ಉದ್ಯಾನದಲ್ಲಿ ಬೇಟೆಯಾಡುವುದನ್ನು ತಡೆಯಲು ಸಹಾಯಕಾರಿಯಾಗಲಿವೆ, ಹಾಗೂ ಈ ಉಪಗ್ರಹ ಫೋನ್ಗಳನ್ನು ವೈರ್ಲೆಸ್ ಅಥವಾ ಕಳಪೆ ಮೊಬೈಲ್ ಸಂಪರ್ಕವಿಲ್ಲದ ಪಾರ್ಕ್ನ '6' ಶ್ರೇಣಿಗಳಲ್ಲಿ ಬಳಕೆ ಮಾಡಲಾಗುತ್ತದೆ. * ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಉದ್ಯಾನವನಕ್ಕಾಗಿ ಈ ಸ್ಯಾಟಲೈಟ್ ಫೋನ್ಗಳನ್ನು ಅಂದಾಜು ರೂ 16 ಲಕ್ಷ ವೆಚ್ಚದಲ್ಲಿ ಖರೀದಿಸಿದೆ, ಇವುಗಳಿಗೆ ಬಿಎಸ್ಎನ್ಎಲ್(BSNL)ನಿಂದ ನೆಟ್ವರ್ಕ್ ಸೇವೆ ಒದಗಿಸಲಾಗುವುದು, ಇವುಗಳ ಮಾಸಿಕ ವೆಚ್ಚಗಳನ್ನು ಉದ್ಯಾನವನದ ಅಧಿಕಾರಿಗಳು ಪೂರೈಸಲಿದ್ದಾರೆ. * ಭಾರತದ ಕಾಜಿರಂಗ ರಾಷ್ಟ್ರೀಯ ಉದ್ಯಾನವು ಅಸ್ಸಾಂ ರಾಜ್ಯದ ಗೋಲಘಾಟ್, ಕಾರ್ಬಿ ಆಂಗ್ಲಾಂಗ್ ಮತ್ತು ನಾಗಾಂವ್ ಜಿಲ್ಲೆಯ ವರೆಗೆ ವಿಸ್ತರಿಸಿದೆ, ಈ ಉದ್ಯಾನವನವು 3ನೇ ಒಂದು ಭಾಗದಷ್ಟು ದೊಡ್ಡ ಕೊಂಬಿನ ಖಡ್ಗಮೃಗಗಳನ್ನು ಹೊಂದಿದೆ, ಹಾಗೂ 2006 ರಲ್ಲಿ ಇದನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಯಿತು.