Job Description: * ಇತ್ತೀಚಿಗೆ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಉಕ್ರೇನ್ ಪರವಾಗಿ ಏಕೈಕ ಚಿನ್ನದ ಪದಕ ಜಯಿಸಿದ ಕುಸ್ತಿಪಟುಗೆ ತವರಿನಲ್ಲಿ ಜನಾಂಗೀಯ ನಿಂದನೆ ಮಾಡಲಾಗಿದೆ, ಹಾಗೂ ನನ್ನ ವಿರುದ್ಧ ಜನಾಂಗೀಯ ನಿಂದನೆಯ ಘೋಷಣೆಗಳನ್ನು ಕೂಗಿದ್ದಾರೆ ಎಂದು ಬೆಲೆನ್ಯುಕ್ ಅವರು ಫೇಸ್ಬುಕ್ನ ಮೂಲಕ ತಮ್ಮ ನೋವನ್ನು ಹೊರಹಾಕಿದ್ದಾರೆ. * ಉಕ್ರೇನ್ ಕುಸ್ತಿಪಟು ಝಾನ್ ಬೆಲೆನ್ಯುಕ್ ಅವರು ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ ಪುರುಷರ ಗ್ರೀಕೋ-ರೋಮನ್ 87 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. * ಉಕ್ರೇನ್ ಕುಸ್ತಿಪಟು ಝಾನ್ ಬೆಲೆನ್ಯುಕ್ ಅವರು '2' ಬಾರಿಯ ವಿಶ್ವ ಕುಸ್ತಿ ಚಾಂಪಿಯನ್ ಆಗಿದ್ದಾರೆ. * ಉಕ್ರೇನ್ನ ಮೊದಲ ಕಪ್ಪು ವರ್ಣೀಯ ಸಂಸದರಾಗಿ ಇವರು 2019 ರಲ್ಲಿ ಅಧ್ಯಕ್ಷ ವ್ಲಾಡಿಮೀರ್ ಝೆಲೆನ್ಸ್ಕೀಸ್ ಅವರ "ಸರ್ವೆಂಟ್ ಆಫ್ ದಿ ಪೀಪಲ್ ಪಾರ್ಟಿ" ಮೂಲಕ ಸಂಸತ್ತಿಗೆ ಪ್ರವೇಶವನ್ನು ಪಡೆದುಕೊಂಡಿದ್ದರು.