Job Description: * ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 14 ಅನ್ನು 'ವಿಭಜನ್ ವಿಭಿಶಿಕಾ ಸ್ಮೃತಿ ದಿನ' ಅಥವಾ 'ವಿಭಿಶಿಕಾ ಸ್ಮಾರಕ ದಿನ' ಎಂದು ಘೋಷಣೆ ಮಾಡಿದ್ದಾರೆ, ಇದೇ ಸಂಧರ್ಭದಲ್ಲಿ ದೇಶದ ವಿಭಜನೆಯ ನೋವನ್ನು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. * ಪ್ರಧಾನಿ ಮೋದಿ ಟ್ವೀಟ್ ಮೂಲಕ ನೀಡಿರುವ ಮಾಹಿತಿಯ ಪ್ರಕಾರ, ದೇಶ ವಿಭಜನೆಯ ಸಂಧರ್ಭದಲ್ಲಿ ದ್ವೇಷ ಹಾಗೂ ಹಿಂಸೆಯಿಂದ ಲಕ್ಷಾಂತರ ಜನರು ಬೇರೆ ಬೇರೆ ಸ್ಥಳಗಳಿಗೆ ಪಲಾಯನ ಮಾಡಿದರು ಹಾಗೂ ಪ್ರಾಣವನ್ನು ಕಳೆದುಕೊಂಡಿದ್ದಾರೆ, ಇದರ ಹಿನ್ನಲೆಯಿಂದ ಮತ್ತು ತ್ಯಾಗದ ನೆನಪಿಗಾಗಿ ಆಗಸ್ಟ್. 14 ನ್ನು 'ವಿಭಿಶಿಕಾ ಸ್ಮಾರಕ ದಿನ'ವಾಗಿ ಆಚರಿಸಲು ನಿರ್ಧರಿಸಲಾಗಿದೆ' ಎಂದು ತಿಳಿಸಿದ್ದಾರೆ.