Job Description: * ಬುಡಕಟ್ಟು ಸಿದ್ದಿ ಸಮುದಾಯದ ಪ್ರಮುಖರಾದ ಡಿಯೋಗ ಸಿದ್ದಿ ಅವರು ತಮ್ಮ 75 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ, ಹಾಗೂ ಇವರು ಕರ್ನಾಟಕದ ನೆಲ್ಸನ್ ಮಂಡೇಲಾ ಎಂಬ ಖ್ಯಾತಿಯನ್ನು ಪಡೆದಿದ್ದರು. * ಡಿಯೋಗ ಸಿದ್ದಿ ಅವರು '5' ದಶಕಗಳಿಂದ ವಿವಿಧ ಹೋರಾಟ ಹಾಗೂ ಸಂಘಟನೆಗಳಲ್ಲಿ ಭಾಗಿಯಾಗಿದ್ದರು, ಅಲ್ಲದೇ "ಗ್ರೀನ್ ಇಂಡಿಯಾ" ಸಂಸ್ಥೆಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. * ಡಿಯೋಗ ಸಿದ್ದಿ ಅವರು ವನಶ್ರೀ ಗಿರಿಜನರ ವಿವಿಧೋದ್ದೇಶಗಳ ಸಹಕಾರ ಸಂಘವನ್ನು ಸ್ಥಾಪನೆ ಮಾಡಿ ಅದರ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. * ಕರ್ನಾಟಕ ರಾಜ್ಯ ಸರ್ಕಾರವು ಡಿಯೋಗ ಸಿದ್ದಿ ಅವರು ಬುಡಕಟ್ಟು ಸಮುದಾಯದ ಏಳಿಗೆಗಾಗಿ ಶ್ರಮಿಸಿರುವ ಕಾರ್ಯವನ್ನು ಪರಿಗಣಿಸಿ 'ವಾಲ್ಮಿಕಿ ಪ್ರಶಸ್ತಿ' ಪ್ರದಾನ ನೀಡಿತ್ತು.