Job Description: * 2021 ರ ಆಗಸ್ಟ್. 13 ರಂದು ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ವಾಹನ ಸ್ಕ್ರ್ಯಾಪೇಜ್ ನೀತಿಯನ್ನು ಆರಂಭಿಸಿದ್ದಾರೆ. * ಈ ರಾಷ್ಟ್ರೀಯ ವಾಹನ ಸ್ಕ್ರ್ಯಾಪೇಜ್(ಗುಜರಿ) ನೀತಿಯನ್ನು 'ಸ್ವಯಂಪ್ರೇರಿತ ವಾಹನ-ಫ್ಲೀಟ್ ಆಧುನೀಕರಣ ಕಾರ್ಯಕ್ರಮ' ಎಂದು ಕರೆಯುತ್ತಾರೆ, ಈ ನೀತಿಯು ಪರಿಸರ ಸ್ನೇಹಿ ಮತ್ತು ವೈಜ್ಞಾನಿಕ ರೀತಿಯಲ್ಲಿ ರಸ್ತೆಗಳಿಂದ ಅನರ್ಹ ವಾಹನಗಳನ್ನು ತೆಗೆದುಹಾಕಲಿದೆ ಎಂದಿದ್ದಾರೆ. * ಈ ನೀತಿಯು 21 ನೇ ಶತಮಾನದ ಸ್ವಚ್ಛ, ದಟ್ಟಣೆ ರಹಿತ ಮತ್ತು ಅನುಕೂಲಕರ ಚಲನಶೀಲತೆಯನ್ನು ಸಾಧಿಸುವ ಭಾರತದ ಗುರಿಯಾಗಿದೆ, ಅಲ್ಲದೇ ನೀತಿಯ ಅನುಸಾರವಾಗಿ ಅಂತಿಮವಾಗಿ ವಾಹನಗಳನ್ನು ರದ್ದುಗೊಳಿಸುವಕ್ಕಿಂತ ಮೊದಲು ಅಧಿಕೃತ ಹಾಗೂ ಸ್ವಯಂಚಾಲಿತ ಕೇಂದ್ರಗಳ ಮೂಲಕ ವೈಜ್ಞಾನಿಕವಾಗಿ ಪರೀಕ್ಷೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. * ಈ ಗುಜರಿ ನೀತಿ ಅಡಿಯಲ್ಲಿ ಹಳೆಯ ಮಾಲಿನ್ಯಕಾರಕ ವಾಹನಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಧುನೀಕರಿಸುವಲ್ಲಿ ಮತ್ತು ಹಂತ ಹಂತವಾಗಿ ತೆಗೆದುಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ತಿಳಿಸಿದ್ದಾರೆ. * ಸುಮಾರು 15 ವರ್ಷ ವಯಸ್ಸಿನ ವಾಣಿಜ್ಯ ವಾಹನಗಳು ಹಾಗೂ 20 ವರ್ಷದ ವೈಯಕ್ತಿಕ ವಾಹನಗಳು ಡೀಸೆಲ್ ಅಥವಾ ಪೆಟ್ರೋಲ್ನಲ್ಲಿ ವಿಧದ ವಾಹನಗಳು ಸ್ವಯಂಚಾಲಿತ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಗುಜುರಿಗೆ ಹಾಕಲಾಗುತ್ತದೆ, ನಂತರ ಈ ವಾಹನಗಳ ನೋಂದಣಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.