Job Description: * ಪ್ರಸ್ತುತ ಗೃಹ ಖಾತೆ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಬಾಲಾಪರಾಧಿಗಳ ವಯೋಮಿತಿಯನ್ನು 16 ವರ್ಷಕ್ಕೆ ಇಳಿಕೆ ಮಾಡುವುದು ಬೇಡವೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. * ಪ್ರಸ್ತುತ 18 ವರ್ಷ ವಯಸ್ಸಿನವರನ್ನು ಶಿಕ್ಷಿಸಲು ಪೋಕ್ಸೋ ಕಾಯ್ದೆ ಪ್ರಬಲವಾಗಿದೆ, ಈ ಕಾರಣದಿಂದ ನಿಗದಿಪಡಿಸಿದ 18 ವರ್ಷ ವಯೋಮಿತಿಯನ್ನು 16 ವರ್ಷಕ್ಕೆ ಇಳಿಸಬೇಕಾದ ಅನಿವಾರ್ಯತೆವಿರುವದಿಲ್ಲ ಎಂದು ಸಂಸದೀಯ ಸಮಿತಿಯು ತನ್ನ ಅಭಿಪ್ರಾಯವನ್ನು ತಿಳಿಸಿದೆ. * ಪೋಕ್ಸೋ ಕಾಯ್ದೆ ಅಡಿಯಲ್ಲಿ 18 ವರ್ಷ ಆಸುಪಾಸಿನ ಮಕ್ಕಳು ಅಪರಾಧ ಪ್ರಕರಣಗಳಲ್ಲಿ ತೊಡಗಿಕೊಂಡಿರುವುದು ಪೋಲಿಸ್ ದಾಖಲೆಗಳಿಂದ ತಿಳಿದು ಬರುತ್ತಿದೆ. * 2015 ರ ಪೋಕ್ಸೋ ಕಾನೂನಿನ ಅನ್ವಯ ಬಾಲಾಪರಾದಿಗಳಿಗೆ ಶಿಕ್ಷೆ ನೀಡಲಾಗುತ್ತಿದೆ, ಇದರಿಂದಾಗಿ ಬಾಲಾಪರಾದಿ ವಯಸ್ಸಿನ ಮಿತಿಯನ್ನು 16 ವರ್ಷಕ್ಕೆ ಇಳಿಸುವ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.