Job Description: * ಪ್ರಸ್ತುತ ಭಾರತ ಸರ್ಕಾರವು 2019 ರಲ್ಲಿ ಉಡುಗೊರೆ ರೂಪದಲ್ಲಿ ಅಫ್ಗಾನಿಸ್ತಾನ ದೇಶಕ್ಕೆ ಎಂಐ - 24 ವಿ ಕದನ ಹೆಲಿಕಾಪ್ಟರ್'ನ್ನು ನೀಡಿತ್ತು, ಇದೀಗ ಆ ಹೆಲಿಕಾಪ್ಟರ್'ನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ. * ಪ್ರಸ್ತುತ ಉತ್ತರ ಅಫ್ಗಾನಿಸ್ತಾನದ ಕುಂದುಜ್ ವಿಮಾನ ನಿಲ್ದಾಣವನ್ನು ತಾಲಿಬಾನ್ ಉಗ್ರರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಅದರಲ್ಲಿ ಭಾರತ ನೀಡಿರುವ ಹೆಲಿಕಾಪ್ಟರ್ ಕೂಡ ಇದೆ ಎಂದು ತಿಳಿದು ಬಂದಿದೆ. * ಈ ಹಿಂದೆ 2019 ರಲ್ಲಿ ಭಾರತ ಸರ್ಕಾರವು (4) ನಾಲ್ಕು ಎಂಐ-24 ವಿ ಹೆಲಿಕಾಪ್ಟರ್ಗಳನ್ನು ಅಫ್ಗಾನಿಸ್ತಾನ ವಾಯುಪಡೆಗೆ ಉಡುಗೊರೆ ರೂಪದಲ್ಲಿ ನೀಡಿತ್ತು, ಅವುಗಳಲ್ಲಿ ಇದೀಗ ಒಂದು ಕದನ ಹೆಲಿಕಾಪ್ಟರ್ ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದಾರೆ. * ತಾಲಿಬಾನ್ ಉಗ್ರರು ಅಫ್ಗಾನಿಸ್ತಾನ ಕುಂದುಜ್ ರಾಜಧಾನಿ ಪ್ರದೇಶದಲ್ಲಿ ಸೈನಿಕರ ವಿರುದ್ಧ ಹೋರಾಡಿ ಇಡೀ ನಗರವನ್ನು ವಶಕ್ಕೆ ಪಡೆದುಕೊಂಡರು, ಅಲ್ಲದೇ ವಿಮಾನ ನಿಲ್ದಾಣದಲ್ಲಿರು ಸೈನಿಕರು ಉಗ್ರರಿಗೆ ಶರಣಾಗಿ ತಮ್ಮ ಸೇನಾ ಶಸ್ತ್ರಾಸ್ತ್ರ, ವಾಹನಗಳು ಹಾಗೂ ಇನ್ನಿತರ ಸಲಕರಣೆಗಳನ್ನು ಉಗ್ರರ ವಶಕ್ಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. * ತಾಲಿಬಾನ್ ಉಗ್ರರು ವಿಮಾನ ನಿಲ್ದಾಣವನ್ನು ವಶಕ್ಕೆ ಪಡೆದಿರುವ ವಿಡಿಯೊವನ್ನು ಹಾಗೂ ಹಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.