Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೀಗ ಭೂ ಪರಿವೀಕ್ಷಣೆ EOS-03 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. * ಈ ಉಪಗ್ರಹವು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ-ಎಫ್10 ರಾಕೆಟ್ ಬಳಸಿಕೊಂಡು ಬೆಳಗ್ಗೆ ಸಮಯ 05.43 ಕ್ಕೆ ಉಡಾವಣೆಯಾಗಿದೆ ಎಂದು ಇಸ್ರೋ ತಿಳಿಸಿದೆ. * ಈ ಉಪಗ್ರಹವು ಮೇಘಸ್ಫೋಟ ಸೇರಿದಂತೆ, ಕೃಷಿ, ಅರಣ್ಯ, ಜಲಮೂಲಗಳು, ನೈಸರ್ಗಿಕ ವಿಕೋಪಗಳ ಮೇಲ್ವಿಚಾರಣೆಯನ್ನು ಮಾಡುತ್ತದೆ ಅಲ್ಲದೇ ದೇಶದ ನೈಜ ಸಮಯದ ಚಿತ್ರಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ, ಹಾಗೂ ಈ ಉಪಗ್ರಹ ಯೋಜನೆಯು 10 ವರ್ಷಗಳವರೆಗೆ ಮುಂದೆ ಸಾಗಲಿದೆ ಎಂದು ಇಸ್ರೋ ತಿಳಿಸಿದೆ. * ಈ ಹಿಂದೆ ಫೆಬ್ರುವರಿ ತಿಂಗಳಿನಲ್ಲಿ ಬ್ರೆಜಿಲ್ ನ ಭೂ ಪರಿವೀಕ್ಷಣಾ ಉಪಗ್ರಹ ಅಮೇಜಾನಿಯಾ-೧ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ.