Job Description: * ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರು ಅಡುಗೆ ಎಣ್ಣೆ ಆಮದಿನ ಮೇಲಿರುವ ಅವಲಂಬನೆ ಕಡಿಮೆಗೊಳಿಸಲು ಮತ್ತು ಎಲ್ಲ ರೀತಿಯ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುವ ಪ್ರಮುಖ ಉದ್ದೇಶದಿಂದ 'ನ್ಯಾಷನಲ್ ಎಡಿಬಲ್ ಆಯಿಲ್ ಮಿಷನ್- ಆಯಿಲ್ ಪಾಮ್(ಎನ್ಎಂಇಒ-ಒಪಿ)ನ್ನು ಘೋಷಣೆ ಮಾಡಿದರು. * ಪ್ರಧಾನಿ ಮೋದಿ ಅವರು ಈ ಮಿಷನ್ಗಾಗಿ 11 ಸಾವಿರ ಕೋಟಿ ರೂ.ಗಿಂತಲೂ ಅಧಿಕ ಬಂಡವಾಳ ಹೂಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು. * ಇದೀಗ ಭಾರತ ದೇಶವು ಅಕ್ಕಿ, ಗೋದಿ ಹಾಗೂ ಸಕ್ಕರೆ ಉತ್ಪಾದನೆಯಲ್ಲಿ ಸ್ವಾಲಂಬನೆ ಸಾಧಿಸಿ ಒಂದು ಹೆಜ್ಜೆ ಮುಂದೆ ಸಾಗಿದೆ, ಇದೀಗ ಅಡುಗೆ ಎಣ್ಣೆಯನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿ ಕೊಳ್ಳುತ್ತಿರುವ ಕಾರಣದಿಂದಾಗಿ ಈ ಮಿಷನ್ ಪ್ರಾರಂಭಿಸಿದ್ದಾರೆ. * ಸದ್ಯದ ಪರಿಸ್ಥಿತಿಯಲ್ಲಿ ತಾಳೆ ಎಣ್ಣೆ ಆಮದು ಪ್ರಮಾಣ ಶೇ 55 ರಷ್ಟಿದೆ ಎಂದಿದ್ದಾರೆ.