Job Description: * ಇದೇ ಮೊದಲ ಬಾರಿಗೆ ಯುದ್ಧಭೂಮಿಯಲ್ಲಿ ಕರ್ತವ್ಯ ನಿರ್ವಹಿಸಲು ಇಂಡೋ- ಟಿಬೆಟಿಯನ್ ಗಡಿ ಪೊಲೀಸ್ ಪಡೆ (ITBP)ಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. * ಉತ್ತರಾಖಂಡದ ಡೆಹ್ರಾಡೂನ್ ನ ಮಸ್ಸೂರಿಯ ತರಬೇತಿ ಅಕಾಡೆಮಿಯಲ್ಲಿ ಪ್ರಕೃತಿ ಹಾಗೂ ದೀಕ್ಷಾ ಎಂಬ ಮಹಿಳಾ ಅಧಿಕಾರಿಗಳು ಯಶಸ್ವಿಯಾಗಿ ತರಬೇತಿ ಮುಗಿಸಿದ್ದಾರೆ, ಇದೀಗ ಇವರು ITBP ಯಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆಗೆ ನೇಮಕಗೊಂಡಿದ್ದಾರೆ. * 2016 ರಿಂದ ITBP ಯಲ್ಲಿ ಮಹಿಳಾ ಅಧಿಕಾರಿಗಳ ನೇಮಕದ ಪ್ರಕ್ರಿಯೆ ಆರಂಭವಾಗಿದೆ, ಇವರನ್ನು UPSC ಪರೀಕ್ಷೆ ಮೂಲಕ ಆಯ್ಕೆ ತರಬೇತಿ ನೀಡಿ ನಂತರ ಸೇವೆಗೆ ನೇಮಕ ಮಾಡಿಕೊಳ್ಳುತ್ತಾರೆ.