Job Description: * ಅಫಘಾನ್ ಪಡೆಗಳು 2021 ರ ಆಗಸ್ಟ್. 9 ರಂದು ಉತ್ತರ ಪ್ರಾಂತ್ಯದ ಸಮಂಗನ್ ನ ಪ್ರಾಂತ್ಯದ ರಾಜಧಾನಿ ಅಯ್ಬಕ್ ನಗರಕ್ಕೆ ದಾಳಿ ಮಾಡುವ ಮೂಲಕ ತಾಲಿಬಾನ್ ಉಗ್ರರನ್ನು ಹಿಮ್ಮೆಟ್ಟಿಸಿದೆ. * ಈ ಅಫಘಾನ್ ಪಡೆಯ ದಾಳಿಯಲ್ಲಿ ಸುಮಾರು 20 ತಾಲಿಬಾನ್ ಉಗ್ರರು ಹತರಾಗಿದ್ದಾರೆ, ನಂತರ ತಾಲಿಬಾನ್ ಹೋರಾಟಗಾರರು ಸುತ್ತಮುತ್ತಲಿನ ಪ್ರದೇಶಗಳಿಗೆ ಪಲಾಯನ ಬೆಳಸಿದರು. * ಈ ಹಿಂದೆ, ಆಗಸ್ಟ್ 7 ರಂದು ತಾಲಿಬಾನ್ ಉಗ್ರರು ದಾಳಿಮಾಡಿ '3' ಪ್ರಾಂತೀಯ ರಾಜಧಾನಿ ನಗರಗಳಾಗಿರುವ ತಲುಕಾನ್, ಸಾರಿ ಪುಲ್ ಹಾಗೂ ಜರಂಜ್ಗಳ ಮೇಲೆ ಹಿಡಿತವನ್ನು ಸಾಧಿಸಿದ್ದರು. * ತಾಲಿಬಾನ್ ಉಗ್ರರು ಈ ಹಿಂದಿನ 3 ತಿಂಗಳಲ್ಲಿ ಅಂದಾಜು 200 ಜಿಲ್ಲೆಗಳನ್ನು ವಶಪಡಿಸಿಕೊಂಡಿದ್ದಾರೆ. * ದೇಶದಲ್ಲಿ ಅಂತರ್ಯುದ್ಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಕಿಸ್ತಾನ ರಾಷ್ಟ್ರವು ರಾಜತಾಂತ್ರಿಕ ಒತ್ತಡದಿಂದ ಅಫ್ಘಾನಿಸ್ತಾನದಲ್ಲಿ ಪ್ರಾದೇಶಿಕ ಸಮ್ಮೇಳನವನ್ನು ಶೀಘ್ರದಲ್ಲೇ ಆಯೋಜಿಸಲು ಮುಂದಾಗಿದೆ. * 2001 ರ ಯುದ್ಧದ ಸಮಯದಲ್ಲಿ ಗುಂಪು ಅಧಿಕಾರದಿಂದ ಕುಸಿದ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಂಗೆ ಪ್ರಾರಂಭವಾಗಿದೆ. * ಸದ್ಯ ಅಫ್ಘಾನಿಸ್ತಾನದ 85% ನಗರಗಳು ತಾಲಿಬಾನ್ ನಿಯಂತ್ರಣದಲ್ಲಿವೆ.