Job Description: * ಪ್ರಸ್ತುತ ಟಿಬೆಟ್ನ ಲಾಸಾ ವಿಮಾನ ನಿಲ್ದಾಣದಲ್ಲಿ ಚೀನಾ ದೇಶವು ಹೊಸದಾಗಿ ನಿರ್ಮಿಸಿದ ಟರ್ಮಿನಲ್ ನ್ನು ಪ್ರಾರಂಭಿಸಿದೆ. * ಇದು ಟಿಬೆಟ್ನ ಅತಿದೊಡ್ಡ ಟರ್ಮಿನಲ್ ಆಗಿದೆ, ಇದರಿಂದಾಗಿ ಹಿಮಾಲಯ ಪ್ರದೇಶದಲ್ಲಿನ ಸಾರಿಗೆ ಮೂಲಸೌಕರ್ಯವನ್ನು ಉತ್ತಮ ಗೊಳಿಸಲು ತೆರೆಯಲಾಗಿದೆ, ಈ ಹೊಸ ಟರ್ಮಿನಲ್ ಪ್ರಯಾಣಿಕರಿಗೆ ಹಾಗೂ ಸರಕು ಸಾಗಣೆಗೆ ಉತ್ತೇಜನ ನೀಡಲಿದೆ, ಅಲ್ಲದೇ ದಕ್ಷಿಣ ಏಷ್ಯಾದ ಜಾಗತಿಕ ಲಾಜಿಸ್ಟಿಕ್ಸ್ ಹಬ್ ಆಗಲು ಟಿಬೆಟ್ ಗೆ ಸಹಾಯ ಮಾಡಲಿದೆ ಎಂದಿದ್ದಾರೆ. * ಹೊಸದಾಗಿ ನಿರ್ಮಿಸಿದ ಟರ್ಮಿನಲ್ ವಿಮಾನ ನಿಲ್ದಾಣ ಯೋಜನೆಯು 603 ದಶಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿದೆ, ಹಾಗೂ ಈ ಲಾಸಾ ವಿಮಾನ ನಿಲ್ದಾಣವು 9 ಮಿಲಿಯನ್ ಪ್ರಯಾಣಿಕರ ವಾರ್ಷಿಕ ನಿರ್ವಹಣಾ ಸಾಮರ್ಥ್ಯವನ್ನು ಪೂರೈಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ, ಇದರೊಂದಿಗೆ ಸುಮಾರು 80,000 ಮೆಟ್ರಿಕ್ ಟನ್ಗಳಷ್ಟು ಸರಕುಗಳನ್ನು ಸಹ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. * ಪ್ರಸ್ತುತ ಟಿಬೆಟ್ '5' ವಿಮಾನ ನಿಲ್ದಾಣಗಳನ್ನು ಹೊಂದಿದೆ, ಅವುಗಳು ಭಾರತ ಹಾಗೂ ನೇಪಾಳದ ಗಡಿಯ ಹತ್ತಿರದಲ್ಲಿವೆ. * ಲಾಸಾ ನಗರವು 17 ನೇ ಶತಮಾನದ ಮಧ್ಯಭಾಗದಿಂದ ಟಿಬೆಟ್'ನ ಧಾರ್ಮಿಕ ಮತ್ತು ಆಡಳಿತಾತ್ಮಕ ರಾಜಧಾನಿಯಾಗಿದೆ, ಇಲ್ಲಿ ಸಾಂಸ್ಕೃತಿಕವಾಗಿ ಮಹತ್ವದ ಪೊಟಾಲ ಅರಮನೆ, ಜೋಖಾಂಗ್ ದೇವಸ್ಥಾನ ಹಾಗೂ ನಾರ್ಬುಲಿಂಗ ಅರಮನೆಗಳನ್ನು ಹೊಂದಿದೆ ನಗರವಾಗಿದೆ.