Job Description: * ಪ್ರಸ್ತುತ ದೇಶೀಯ ಪ್ರವಾಸಿಗರನ್ನು ಆಕರ್ಷಿಸಲು ಕೇಂದ್ರಾಡಳಿತ ಪ್ರದೇಶ ಲಡಾಖ್ ನ, ಚೀನಾ- ಪಾಕಿಸ್ತಾನ ಗಡಿಯಲ್ಲಿನ ಸಂರಕ್ಷಿತ ಪ್ರದೇಶಗಳಿಗೆ ಭಾರತೀಯರಿಗೆ ಭೇಟಿ ನೀಡಲು ವಿಧಿಸಿದ್ದ ಒಳರೇಖೆ ಅನುಮತಿಯ ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ಲಡಾಖ್ ಕೇಂದ್ರಾಡಳಿತ ಪ್ರದೇಶದ ಗೃಹ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ. * ಪ್ರಸ್ತುತ ಭಾರತೀಯ ಪ್ರಜೆಗಳು, ದೇಶೀಯ ಪ್ರವಾಸಿಗರು ಹಾಗೂ ಸ್ಥಳೀಯ ನಿವಾಸಿಗಳಿಗೆ ಹೇರಲಾಗಿದ್ದ ಐಎಲ್ಪಿ ನಿರ್ಬಂಧವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ಎಂದು ಲಡಾಖ್ ಕೇಂದ್ರಾಡಳಿತ ಪ್ರದೇಶದ ಗೃಹ ಸಚಿವಾಲಯವು ತಿಳಿಸಿದೆ. * ವಿದೇಶಿಯರು ಈ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡಲು ಇಚ್ಚಿಸಿದ್ದಲಿ ಪರವಾನಗಿ ಅರ್ಜಿಯನ್ನು ಪಡೆಯಬೇಕು ಆ ಪರವಾನಗಿಯ ಅರ್ಜಿ 7 ದಿನಗಳಿಂದ 15 ದಿನಗಳವರೆಗೆ ಮಾನ್ಯತೆಯನ್ನು ಹೊಂದಿರಲಿದೆ ಎಂದು ತಿಳಿಸಿದ್ದಾರೆ. * ಭಾರತೀಯ ಪ್ರವಾಸಿಗರು ಲಡಾಖ್'ನ ನುಬ್ರಾ ಕಣಿವೆ, ಪಾಂಗೊಂಗ್ ಸರೋವರ, ಸೊಮೊರಿರಿ ಸರೋವರ ಮತ್ತು ಆರ್ಯನ್ ಗ್ರಾಮಗಳ ಸಂರಕ್ಷಿತ ಪ್ರದೇಶಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ. * ಲಡಾಖ್'ನ ಈ ಸಂರಕ್ಷಿತ ಪ್ರದೇಶಗಳು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಹಾಗೂ ಚೀನಾದ ನಿಯಂತ್ರಣ ರೇಖೆ (ಎಲ್ಎಸಿ) ಹತ್ತಿರ ಇವೆ.