Job Description: * ಆಗಸ್ಟ್. 7 ರಂದು ಕೇಂದ್ರ ಜವಳಿ ಸಚಿವಾಲಯವು 7 ನೇ ರಾಷ್ಟ್ರೀಯ ಕೈಮಗ್ಗ ದಿನವನ್ನು ಆಯೋಜಿಸಲು ಸಿದ್ಧವಾಗಿದೆ. * ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ರಾಷ್ಟ್ರೀಯ ಕೈಮಗ್ಗ ದಿನವನ್ನು 2015 ರ ಆಗಸ್ಟ್. 7 ರಂದು ಚೆನ್ನೈನಲ್ಲಿ ಉದ್ಘಾಟಣೆ ಮಾಡಿದ್ದಾರೆ. * ಈ ಕೈಮಗ್ಗ ದಿನದ ಸಂದರ್ಭದಲ್ಲಿ ನೇಕಾರಿಕೆ ಸಮುದಾಯವನ್ನು ಭಾರತದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿನ ಅವರ ಕೊಡುಗೆಗಳನ್ನೂ ಗೌರವಿಸಲಾಗುತ್ತದೆ, ಹಾಗೂ 3ಕೈಮಗ್ಗ ಕರಕುಶಲ ಗ್ರಾಮಗಳನ್ನು ಸ್ಥಾಪನೆ ಮಾಡಲಾಗುತ್ತದೆ. - ಕೇರಳದ ತಿರುವನಂತಪುರಂನಲ್ಲಿ ಕೋವಲಂ ಗ್ರಾಮ. - ಅಸ್ಸಾಂನ ಗೋಲಘಾಟ್ ಜಿಲ್ಲೆಯ ಮೊಹಪರ ಗ್ರಾಮ. - ಶ್ರೀನಗರದ ಬುಡ್ಗಾಂನಲ್ಲಿ ಕಣಿಹಾಮ ಗ್ರಾಮ. * ಪ್ರಸ್ತುತ ಕೇಂದ್ರ ಜವಳಿ ಸಚಿವಾಲಯವು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ, 3 ಕೈಮಗ್ಗ ಕರಕುಶಲ ಗ್ರಾಮಗಳನ್ನು ಸ್ಥಾಪನೆ ಮಾಡಲಿದೆ. * 1905 ರ ಆಗಸ್ಟ್. 7 ರ ಕೈಮಗ್ಗದ ಸ್ವದೇಶಿ ಚಳುವಳಿಯನ್ನು ಪ್ರಾರಂಭವಾಗಿದೆ, ಹಾಗೂ ಈ ದಿನದಂದು ಭಾರತದಾದ್ಯಂತ ಇರುವ ಕೈಮಗ್ಗ ನೇಕಾರರು ಹಾಗೂ ಕುಶಲಕರ್ಮಿಗಳಿಗೆ ಗೌರವ ನೀಡಲು ಆಚರಣೆ ಮಾಡಲಾಗುತ್ತದೆ. * ಭಾರತದ ಪ್ರತಿಯೊಂದು ರಾಜ್ಯವು ವಿಭಿನ್ನ ನೇಯ್ಗೆಯಲ್ಲಿ ಪರಿಣತಿ ಹೊಂದಿದೆ. - ಅಸ್ಸಾಂ ಕಮ್ರಪ್ ಹತ್ತಿ ಮತ್ತು ಎರಿ ರೇಷ್ಮೆಗೆ ಪರಿಣತಿಯಾಗಿದೆ. - ನಾಗಾಲ್ಯಾಂಡ್ನ ದಿಮಾಪುರ ಹಾಗೂ ಫೆಕ್ ಪಟ್ಟಣಗಳು ಬ್ಯಾಕ್ಸ್ಟ್ರಾಪ್-ಲೂಮ್ ಜವಳಿಗಳಿಗೆ ಹೆಸರುವಾಸಿಯಾಗಿದೆ. - ಆಂಧ್ರಪ್ರದೇಶ ವೆಂಕಟಗಿರಿಯ ಉತ್ತಮ ಹತ್ತಿ ಮತ್ತು ರೇಷ್ಮೆ ನೇಯ್ಗೆಗೆ ಹೆಸರುವಾಸಿಯಾಗಿದೆ. - ಒಡಿಶಾ ಉತ್ತಮ ಹತ್ತಿ ಮತ್ತು ರೇಷ್ಮೆಯಲ್ಲಿ ಮಣಿಯಬಂಧ ವೆಫ್ಟ್ ಇಕಾಟ್ಗೆ ಹೆಸರುವಾಸಿಯಾಗಿದೆ.