Job Description: * ಈ ಬಾರಿಯ ಟೋಕಿಯೊ ಒಲಂಪಿಕ್ಸ್ ಟೂರ್ನಿಯಲ್ಲಿ ಭಾರತೀಯ ಮಹಿಳಾ ಹಾಕಿ ತಂಡವು ಪದಕ ಗೆಲುವಲ್ಲಿ ವಂಚಿತವಾಗಿದೆ, ಆದರೆ ಉತ್ತಮ ಪ್ರದರ್ಶವನ್ನು ನೀಡಿದೆ, ಇದಕ್ಕಾಗಿ ಹರಿಯಾಣ ಸರ್ಕಾರವು ಭಾರತ ಮಹಿಳಾ ಹಾಕಿ ತಂಡಕ್ಕೆ ಉಡುಗೊರೆ ಘೋಷಣೆ ಮಾಡಿದೆ. * ಪ್ರಸ್ತುತ ಹರಿಯಾಣ ರಾಜ್ಯ ಸರ್ಕಾರವು ರಾಜ್ಯದ ಮಹಿಳಾ ಹಾಕಿ ತಂಡದ '9' ಆಟಗಾರರಿಗೆ ತಲಾ 50 ಲಕ್ಷ ನಗದು ಬಹುಮಾನ ನೀಡಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ತಿಳಿಸಿದ್ದಾರೆ. * ಭಾರತೀಯ ಮಹಿಳಾ ಹಾಕಿ ತಂಡವು ಬ್ರಿಟನ್ ತಂಡದ ವಿರುದ್ಧ ಸೋಲು ಅನುಭವಿಸಿ ಕಂಚಿನ ಪದಕವನ್ನು ಪಡೆಯುವಲ್ಲಿ ವಿಫಲವಾಗಿದೆ, ಪ್ರಸ್ತುತ ಭಾರತ ಮಹಿಳಾ ಹಾಕಿತಂಡ 4 ನೇ ಸ್ಥಾನವನ್ನು ಪಡೆದುಕೊಂಡು ಒಲಂಪಿಕ್ಸ್ ಕ್ರೀಡಾಕೂಟದಿಂದ ಹೊರ ನಡೆದಿದೆ.